ನಗರದ ಅಭಿವೃದ್ದಿ ಕಾರ್ಯವೋ ಇಲ್ಲ ಸಾರ್ವಜನಿಕರ ಹಣ ಹೊಡಯುವ ಕಾರ್ಯಕ್ರಮವೋ?
ಇದೇನು ನಗರದ ಅಭಿವೃದ್ದಿ ಕಾರ್ಯವೋ ಇಲ್ಲ ಸಾರ್ವಜನಿಕರ ಹಣ ಹೊಡೆಯುವ ಕಾರ್ಯಕ್ರಮವೋ? ನೀರಿನ ಸಂಪರ್ಕ ಕೊಡಬೇಕು ಅಂತ ಗೊತ್ತಿದ್ದರೂ ರಸ್ತೆಗಳಿಗೆ ಕಾಂಕ್ರೀಟ್ ಅಥವ ಟಾರು ಹಾಕುತ್ತಾರೆ, ಇನ್ನೂ 6 ತಿಂಗಳೂ ಕಳೆದಿಲ್ಲ ಆಗಲೆ ಅಗೆದು ಹಾಕಲಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣ ಏನು ಸುಮ್ಮನೆ ಬರುತ್ತದೆಯೇ??? ಏಕೆ? ರಸ್ತೆ ಹಾಕುವ ಮೊದಲೇ ಮುಂದಾಲೋಚನೆ ಇರುವುದಿಲ್ಲವೇ? ಇಲ್ಲ ಈ ರೀತಿ ಮಾಡಿದ ಕೆಲಸಗಳನ್ನೇ ಹಾಳು ಮಾಡಿ ಮತ್ತೆ ಮಾಡಿದರೆ ಹಣ ಸಂಪಾದನೆಯೇ?? ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಾಗುತ್ತದೆ. ವರದಿ: ಪ್ರಕಾಶ್ ಗಾಳಿಪಟ
Comments