ಹೈನುಗಾರಿಕೆ ಮತ್ತು ಕೃಷಿಗೆ ಹೆಚ್ಚಿನ ಒತ್ತು ನೀಡಿ : ಉಪೇಂದ್ರ

ಗುಂಡ್ಲುಪೇಟೆ ತಾಲ್ಲೂಕಿನ ಅಗತಗೌಡನಹಳ್ಳಿಗೆ ಖಾಸಗಿ ಭೇಟಿ ನಿಮಿತ್ತ ಆಗಮಿಸಿದ್ದ ಚಲನಚಿತ್ರ ನಟ ಹಾಗೂ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರರವರು ರೈತರು ಹೈನುಗಾರಿಕೆ ಮತ್ತು ಕೃಷಿಗೆ ಹೆಚ್ಚಿನ ಒತ್ತು ನೀಡಿದಾಗ ಮಾತ್ರ ನೀವು ಉನ್ನತಿ ಹೊಂದಲು ಸಾಧ್ಯ.
ಹಾಗೆಯೇ ಮುಂದಿನ ದಿನಗಳಲ್ಲಿ ನಮ್ಮ ಪಕ್ಷಕ್ಕೆ ಕೈಜೋಡಿಸಿ ನಿಮ್ಮ ಅಭಿವೃದ್ಧಿ ನೀವು ನಾಯಕರಾದಗಲೇ ಸಾಧ್ಯ. ಎಂದು ಹೇಳುವುದರ ಜೊತೆಗೆ ಕಾರ್ಯಕರ್ತರಾಗಿರುವುದನ್ನ ಬಿಟ್ಟು ನಾಯಕರಾಗಿ ಅದು ನಮ್ಮ ಪಕ್ಷದಲ್ಲಿ ತೆರೆದ ಪುಸ್ತಕದಂತಿದೆ ಆದ್ದರಿಂದ ನಿಮ್ಮ ಬೆಂಬಲ ಅಗತ್ಯ ಎಂದು ತಿಳಿಸಿದರು. ಒಟ್ಟಾರೆ ಉಪ್ಪಿಯ ನಡೆ ಪ್ರಜಾಕೀದತ್ತ ಇದ್ದು ಕಾರ್ಯಕರ್ತರನ್ನ ನಾಯಕರನ್ನಾಗಿಸುವಲ್ಲಿದೆ. ಇದರಿಂದ ಉಪ್ಪಿ ಅಭಿಮಾನಿಗಳೂ ಸಹ ಕುತೂಹಲದಿಂದ ಅವರೊಂದಿಗೆ ಕೈ ಜೋಡಿಸುತ್ತಿದ್ದಾರೆ.
Comments