ಹೊಂದಾಣಿಕೆ ರಾಜಕಾರಣ ಹಿಂದೆಯೂ ಮಾಡಿಲ್ಲ ಮುಂದೆಯೂ ಮಾಡಲ್ಲ : ಎಚ್ ಡಿ ಡಿ
ಯುದ್ದಕ್ಕೆ ನಿಂತಮೇಲೆ ಇಂಟ್ರನಲ್ ಮತ್ತು ಎಕ್ಸಟ್ರನಲ್ ಅಂಡರ್ ಸ್ಟಾಂಡಿಂಗ್ ಇಲ್ಲ ರಾಜಕೀಯಕ್ಕೆ ಬಂದು 57 ವರ್ಷಗಳಾಗಿವೆ ನನ್ನ ರಾಜಕೀಯವನ್ನು ನಿಲ್ಲಿಸಲು ಆಗುವುದಿಲ್ಲ ಹಾಗೇಯೇ ಜೆಡಿಎಸ್ ಬೆಳವಣಿಗೆಯನ್ನು ಸಹ ತಪ್ಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮುಂದಿನ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನ ಎಚ್ ಡಿ ಕುಮಾರಸ್ವಾಮಿಯವರು ತಯಾರು ಮಾಡುತ್ತಿದ್ದಾರೆ. ಇಂದು ಸಹ ಅದೇ ವಿಚಾರವಾಗಿ ಚರ್ಚೆ ನಡೆಸಿದ್ದೇವೆ. 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿ ಇದೆ. ಈಗಲೇ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ್ರೆ ಹಲವಾರು ಗೊಂದಲಗಳು ಉಂಟಾಗಿ ಕುತ್ತಿಗೆಗೆ ಬರುತ್ತೆ. ಹಾಗಾಗಿ ಎಲ್ಲವನ್ನು ಸಿದ್ದಪಡಿಸಿದ ಬಳಿಕ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಇದೇ ವೇಳೆ ಚನ್ನಪಟ್ಟಣ ಶಾಸಕ ಯೋಗೇಶ್ವರ್‌ಗೆ ಟಾಂಗ್ ನೀಡಿದ ಎಚ್.ಡಿ ದೇವೇಗೌಡರು 'ಅವರನ್ನು ಆಧುನಿಕ ಭಗೀರಥ ಅಂತಾರೆ. ಅವರು ನೀರನ್ನು ಎಲ್ಲಿಂದ ತಂದ್ದಿದಾರೆ, ಅದರ ಮೂಲ ಯಾರು, ಅದರ ಹಿಂದೆ ಯಾರಿದ್ದಾರೆ ಅಂತಾ ಹೇಳುತ್ತಾರ. ಅದು ಅವರಿಂದ ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
Comments