ಅಭಯ ಆಂಜನೇಯಸ್ವಾಮಿ ದೇವಸ್ಥಾನದ ಉದ್ಘಾಟನೆ
ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಲಹಳ್ಳಿ ಕೆರೆಏರಿಯ ಮೇಲೆ ನೂತನವಾಗಿ ನಿರ್ಮಿಸಿರುವ ಶ್ರೀ ಅಭಯ ಆಂಜನೇಯಸ್ವಾಮಿಯವರ ದೇವಾಲಯವನ್ನು ಹನುಮಜಂತಿಯಂದು ಉದ್ಘಾಟಿಸಲಾಯಿತು. ಪರಮಪೂಜ್ಯ ಶ್ರೀ ಶ್ರೀ ದಿವ್ಯಜ್ಞಾನಾನಂದ ಸ್ವಾಮೀಜಿಯವರ ದಿವ್ಯ ಸಾನಿದ್ಯದಲ್ಲಿ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಮುಖ್ಯ ಅತಿಥಿಯಾಗಿ ಶ್ರೀ ಕೆ.ಎಂ. ಹನುಮಂತರಾಯಪ್ಪ, ಅಧ್ಯಕ್ಷರು, ಕೇಂದ್ರ ರೇಷ್ಮೆ ಮಂಡಳಿ, ಭಾರತ ಸರ್ಕಾರ ಇವರು ಆಗಮಿಸಿದ್ದರು. ನೂತನವಾಗಿ ನಿರ್ಮಿಸಿರುವ ದೇವಸ್ಥಾನಕ್ಕೆ ಸ್ಥಿರಬಿಂಭ, ವಿಮಾನ ಕಲಶ, ಧ್ವಜಸ್ಥಂಭ ಪ್ರತಿಷ್ಠಾಪನಾ ಮಹೋತ್ಸವ ನೆರವೇರಿತು. ಆಗಮಿಕ ವಿದ್ವಾನ್ ಶ್ರೀನಿವಾಸ್ ಮತ್ತು ತಂಡದವರು ಕಾರ್ಯಕ್ರಮ ನೆಡೆಸಿಕೊಟ್ಟರು. ದೊಡ್ಡಬಳ್ಳಾಪುರ ನಗರದ ಹಾಗೂ ಸುತ್ತಮುತ್ತಲ ಹಳ್ಳಿಯ ಹಲವಾರು ದಾನಿಗಳ ನೆರವಿನಿಂದ ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಕಾರ್ಯಕ್ರಮಕ್ಕೆ ಶ್ರೀ ಮುನೇಗೌಡರು, ಶ್ರೀ ಅನಿಲ್ ಕುಮಾರ್ ಗೌಡರು ಮತ್ತಿತರ ಗಣ್ಯರು ಆಗಮಿಸಿದ್ದರು.
Comments