ಡಿಸೆಂಬರ್ ೧೮ರಿಂದ ಘಾಟಿ ಕ್ಷೇತ್ರ ದನಗಳ ಜಾತ್ರೆ ಆರಂಭ. ೨೪ರಂದು ಬ್ರಹ್ಮರಥೋತ್ಸವ :- ಉಪವಿಭಾಗಾಧಿಕಾರಿ ಮಹೇಶ್ ಬಾಬು
ನಗರದ ಉಪವಿಭಾಗಾದಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಜಾತ್ರೆಯ ಸಿದ್ದತೆಗಳ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಈ ಬಾರಿ ಬ್ರಹ್ಮರಥೋತ್ಸವ ಭಾನುವಾರ ನಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವ ನಿರೀಕ್ಷೆ ಇದೆ, ಹೀಗಾಗಿ ಪೋಲೀಸರು ಸಂಚ್ರಿ ವ್ಯವಸ್ಥೆ ಸೇರಿದಂತೆ ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕು, ಜಾತ್ರೆಗೆ ಬರುವ ದನಗಳಿಗೆ ಕುಡಿಯುವನೀರು, ರಾತ್ರಿ ವೇಳೆ ದೀಪದ ವ್ಯವಸ್ಥೆ ಹಾಗೂ ದನಗಳ ಚಿಕಿತ್ಸೆಗೆ ಪಶುವೈದ್ಯರು ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಜಾತ್ರೆಯಲ್ಲಿ ತಾತ್ಕಾಲಿಕಾ ಶೌಚಾಲಯಗಳ ನಿರ್ಮಾಣ ಸ್ವಚ್ಚತೆ ಕಾಪಾಡಾಲಿ ಗ್ರಾಮ ಪಂಚಾಯಿತಿ ನೌಕರರೊಂದಿಗೆ ನಗರಸಭೆಯ ಪೌರಕಾರ್ಮಿಕರನ್ನು ತೊಡಗಿಸಲು ಸೂಚನೆ ನೀಡಿದರು. ದನಗಳ ಜಾತ್ರೆ ಹಾಗೂ ರಥೋತ್ಸವಕ್ಕೆ ಸಾವಿರಾರು ಭಕ್ತರು ಬರುವುದರಿಂದ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸಲು ಡಿಪೋ ವ್ಯವಸ್ಥಾಪಕರಿಗೆ ಸೂಚಿಸಿದರು.
ಸಭೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಸಿದ್ದರಾಜು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಲಧಿರಂಗಪ್ಪ, ಮುಖ್ಯ ಅರ್ಚಕ ರಾಮನಾಥಶರ್ಮ, ವ್ಯವಸ್ಥಾಪಕ ಮಂಡಲಿ ಅಧ್ಯಕ್ಷ ಜಿ.ಎಂ. ಚನ್ನಪ್ಪ, ಸದಸ್ಯರಾದ ಭ್ರಮರಾಂಭ, ಮುನಿರಾಜು, ಓಬಡೇನಹಳ್ಳಿ ಮುನಿಯಪ್ಪ, ಮಂಜುನಾಥ್, ಹಾಗೂ ನಾನಾ ಅಧಿಕಾರಿಗಳು ಭಾಗವಹಿಸಿದ್ದರು.
Comments