ಕುಮಾರಿ ಹರ್ಷಿಣಿ ಯೋಗಾಸನದಲ್ಲಿ ಗಿನ್ನಿಸ್ ಗೆ ಆಯ್ಕೆ




ದೊಡ್ಡಬಳ್ಳಾಪುರ ನಗರದ ನಿವಾಸಿ ರಾಮಕೃಷ್ಣರವರ ಪುತ್ರಿ ಕುಮಾರಿ ಹರ್ಷಿಣಿ ಹೆಚ್.ಆರ್. ರವರು ತನ್ನ ೧೨ನೇ ವಯಸ್ಸಿನಲ್ಲಿ ಮೂಡಬಿದರೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನ 2017 ನುಡಿಸಿರಿ ವಿಭಾಗದ "ವಿದ್ಯಾರ್ಥಿಸಿರಿ" ಕಾರ್ಯಕ್ರಮದಲ್ಲಿ ಕೂರ್ಮಾಸನದಲ್ಲಿ 175ಕೆ.ಜಿ. ತೂಕದ ಭಾರ ಹೊತ್ತು ಯೋಗ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ. ಹರ್ಷಿಣಿಗೆ ಇಲ್ಲಿನ ಬಸವಣ್ಣ ಸೇವಾ ಸಮಿತಿಯ ಪದಾದಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
Comments