ಕುಟುಂಬದ ಬಗ್ಗೆ ಸ್ಪೋಟಕ ರಹಸ್ಯ ಬಿಚ್ಚಿಟ್ಟ ನಿಖಿಲ್ ಕುಮಾರ ಸ್ವಾಮಿ

ನಿಖಿಲ್ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಹೇಳಿದ್ದು ಹೀಗೆ , ನಾನು ಯಾವುದಾದರು ಒಂದು ಕೆಲಸ ತೆಗೆದುಕೊಂಡರೆ ಮೊದಲು ಅದನ್ನು ಪೂರ್ಣ ಮಾಡಿ ನಂತರ ಬೇರೆ ಕೆಲಸದ ಬಗ್ಗೆ ಯೋಚಿಸುತ್ತೇನೆ. ಚಿತ್ರ ರಂಗವನ್ನು ನಾನು ಆಸೆಪಟ್ಟು ಬಂದಿದ್ದು ಇಲ್ಲೇ ಉಳಿಯಬೇಕು ಎಂದು ಕೊಂಡಿದ್ದೇನೆ. ಅಲ್ಲದೆ ಮುಂದೆ ದೈವಿಚ್ಛೆ ಹೇಗಿದೆಯೋ ಅದರ ಮೇಲೆ ನಾನು ರಾಜಕೀಯ ಪ್ರವೇಶದ ಬಗ್ಗೆ ಯೋಚಿಸುತ್ತೇನೆ. ಸದ್ಯಕ್ಕೆ ನಾನು ಸೋಶಿಯಲ್ ವರ್ಕರ್ ಆಗಿ ಕೆಲಸಮಾಡುತ್ತೇನೆ. ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ.
ಏಕೆಂದರೆ ನಮ್ಮ ತಂದೆಯವರು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಅವರು ಬುದ್ದಿಶಕ್ತಿಯಿಂದ ಯೋಚಿಸುವುದಲ್ಲದೆ, ಹೃದಯದಿಂದ ಯೋಚಿಸಿ ರಾಜ್ಯದ ಜನತೆಗೆ ಒಳ್ಳೆಯದು ಮಾಡಬೇಕೆಂಬುದಷ್ಟೇ ಅವರ ಮನಸ್ಸಿನಲ್ಲಿರುವುದು. ಮತ್ತೆ ಕೆಲವರು ದೊಡ್ಡ ಮನೆಯಲ್ಲಿ ಟಿಕೆಟ್ ಗಾಗಿ ಜಗಳ ಅಂತೆಲ್ಲಾ ಮಾತನಾಡುತ್ತಾರೆ. ಆದರೆ ಈ ರೀತಿ ಯಾವುದೇ ವಿಚಾರಗಳು ನಮ್ಮ ಮಧ್ಯೆ ನಡೆದಿಲ್ಲ. ಅಲ್ಲದೆ ನನ್ನ ತಮ್ಮ ಪ್ರಜ್ವಲ್ ರನ್ನು ಸಮಾಧಾನಪಡಿಸಲು ಪಕ್ಷದ ಕಾರ್ಯದರ್ಶಿಯ ಪಟ್ಟ ನಿದಿಡಲಾಗಿದೆ ಎಂಬ ಮಾತು ಕೇಳಿ ಬರುತ್ತಿವೆ. ಸೂಡ್ ಕೇಸ್ ರಾಜಕಾರಣದ ಬಗ್ಗೆ ಪ್ರಜ್ವಲ್ ಮಾತಾಡಿರುವುದು ಸಹ ಆ ಸಂದರ್ಭಕ್ಕೆ ಅವನಿಗೆ ಆ ರೀತಿ ಅನಿಸಿರಬಹುದು ಅಷ್ಟೇ.ಆದರೆ ನಮ್ಮಿಬ್ಬರ ಮಧ್ಯೆ ಯಾವುದೇ ಮನಸ್ತಾಪಗಳಿಲ್ಲ. ಅಕ್ಕ ತಂಗಿಯರ ನಡುವೆ ಒಳಗೊಳಗೇ ಜಗಳವಾಡುತಿದ್ದಾರೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದ ನಮ್ಮ ಮನಸ್ಸಿಗೆ ಬೇಸರವಾಗಿದೆ. ಆದರೆ ಆವತ್ತು ನಮ್ಮ ತಾಯಿಯವರು ಮಧುಗಿರಿಯಲ್ಲಿ ನಿಂತರು ನಮ್ಮ ತಂದೆ, ತಾತ ಹಾಗು ಪಕ್ಷದ ಮುಖಂಡರು ಸೇರಿ ತೀರ್ಮಾನ ಮಾಡಿದ್ದರು. ಬೈ ಎಲೆಕ್ಷನ್ ಟೈಮ್ ನಮ್ಮ ತಾಯಿಯವರಿಗೆ ರಾಜಕೀಯದ ಬಗ್ಗೆ ಏನು ಗೊತ್ತಿರಲಿಲ್ಲ.
ಯಾರು ನಿಲ್ಲಬೇಕೆಂದು ಪಕ್ಷದ ಮುಖಂಡರು ನಿರ್ಧರಿಸುತ್ತಾರೆ. ಅವರ ತೀರ್ಮಾನಕ್ಕೆ ಎಲ್ಲರು ಬದ್ಧರಾಗಿರುತ್ತೇವೆ. ನಾನು ಯಾವುದೇ ರೀತಿಯಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ನಮ್ಮ ತಾಯಿಯವರಿಗೆ ಒತ್ತಾಯಿಸುವುದಿಲ್ಲ. ಅಲ್ಲದೆ ದೊಡ್ಡಮ್ಮ ,ನನ್ನ ತಮ್ಮ ಯಾರೇ ಚುನಾವಣೆಗೆ ನಿಂತರು ನಾನು ಪಕ್ಷದ ಕಡೆಯಿಂದ ಪ್ರಚಾರಕ್ಕೆ ಹೋಗುತ್ತೇನೆ. ಅದಕ್ಕಾಗಿ ನನಗೆ ಪಕ್ಷದಲ್ಲಿ ಯಾವುದೇ ಅಧಿಕಾರ ಬೇಡ. ಪಕ್ಷ ತೊರೆದಿದ್ದರು ಸಹ ಜಮೀರ್ ಅಹಮದ್ ರವರು ನಿಖಿಲ್ ನನ್ನ ಮಗ, ನಾನು ಅವರ ಚಿಕ್ಕಪ್ಪ ಇದ್ದಂತೆ ಎಂದು ಪ್ರೀತಿಯಿಂದ ಹೇಳುತ್ತಾರೆ. ಅಲ್ಲದೆ ಅವರು ಪಕ್ಷದಲ್ಲಿದ್ದಾಗ ಒಂದೇ ಮಾತು ಹೇಳುತ್ತಿದ್ದರು ನಾನು ರಾಜಕಾರಣದಲ್ಲಿದ್ದರೆ ಅದು ಕುಮಾರಣ್ಣನ ಜೊತೆಗೆ ಇರುತ್ತೇನೆ. ಇಲ್ಲವಾದರೆ ರಾಜಕೀಯ ಬಿಡುತ್ತೇನೆ ಎಂದು ಹಲವು ಭಾರಿ ಹೇಳುತ್ತಿದ್ದರು. ಗೊತ್ತಿಲ್ಲ ನಮ್ಮ ಪಕ್ಷ ಬಿಡುವ ಸಂದರ್ಭ ಯಾವ ರೀತಿ ಇತ್ತು ಎಂದು ನನಗೆ ತಿಳಿದಿಲ್ಲ. ಇವತ್ತಿನ ದಿನ ನಮ್ಮ ತಂದೆಯವರಿಗೆ 24 ಗಂಟೆಗಳು ಸಹ ಸಾಲುವುದಿಲ್ಲ ಏಕೆಂದ್ರೆ ಅವರ ಕೆಲಸಗಳು ಆ ರೀತಿ ಇರುತ್ತವೆ. ಇದರಿಂದ ಕುಮಾರಸ್ವಾಮಿಯವರು ಮುಖ್ಯ ಮಂತ್ರಿ ಆದಮೇಲೆ ನಮ್ಮೊಂದಿಗೆ ಹೆಚ್ಚು ಸಮಯ ಕಳೆಯುತ್ತೇವೆಂದು ನಮ್ಮ ತಂದೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಈ ರೀತಿಯ ಮಾತುಗಳು ಕೇಳಿಬರುತ್ತಿದ್ದವು, ಅಲ್ಲದೆ ಪಕ್ಷದ ಕಾರ್ಯಕರ್ತರೊಂದಿಗೆ ಆದ್ಯತೆ ನೀಡುತ್ತಾರೆ ಎಂದು ಹಲವು ಮುಖಂಡರು ಅಸಮಾಧಾನ ವ್ಯೆಕ್ತ ಪಡಿಸಿದ್ದರು. ಆದರೆ ಈ ಭಾರಿ ನಮ್ಮ ಪಕ್ಷ ವಿಧಾನ ಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂಬ ಭರವಸೆ ನನಗಿದೆ ಎಂದು ನಿಖಿಲ್ ತಮ್ಮ ರಾಜಕೀಯ ನಿಲುವಿನ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
Comments