ಕೆಪಿಜೆಪಿ ಪಕ್ಷಕ್ಕೆ ಬರುವ ಅಭ್ಯರ್ಥಿಗಳಿಗೆ ಖಡಕ್ ಸೂಚನೆಗಳನ್ನ ನೀಡಿದ ಉಪ್ಪಿ

ಇಂದು ಮೈಸೂರು ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಉಪೇಂದ್ರ, ತಮ್ಮ ನೂತನ ಪಕ್ಷದ ಧ್ಯೇಯವನ್ನ ಸ್ಪಷ್ಟಪಡಿಸುತ್ತಾ ಪಕ್ಷಕ್ಕೆ ಬರುವವರಿಗೆ ಕೆಲವು ಖಡಕ್ ಸೂಚನೆಗಳನ್ನ ನೀಡಿದರು. ರಾಜಕಾರಣ ಅಂದ್ರೆ ಹಿಂಗೆ ಇದೆ ಅಂತ ನಂಬಿ ಬಿಟ್ಟಿದ್ದೇವೆ. ಅದನ್ನ ಬದಲಾವಣೆ ಮಾಡೋದು ಹೇಗೆ ಅನ್ನೋದೆ ದೊಡ್ಡ ಕುತೂಹಲವಾಗಿದೆ. ಅದಕ್ಕಾಗಿ ಕೆಪಿಜೆಪಿ ಎಂಬ ಕ್ಯಾಶ್‌ಲೆಸ್ ಪಾರ್ಟಿ ಹುಟ್ಟಿಹಾಕಿದ್ದೇವೆ.
ಈಗ ಮಾಧ್ಯಮಗಳ ಮೂಲಕ ಹಳ್ಳಿ ಹಳ್ಳಿಗೂ ನಮ್ಮ ಪಕ್ಷ ತಲುಪಿದೆ. ನಮ್ಮ ಪಕ್ಷಕ್ಕೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಅದಕ್ಕಾಗಿಯೇ ನಾವು ಆ್ಯಪ್ ಬಿಡುಗಡೆ ಮಾಡಿದ್ದೇವೆ. ವೆಬ್‌ಸೈಟ್ ಮೂಲಕ ನಮ್ಮನ್ನ ಸಂಪರ್ಕಿಸಬಹುದು. ಅರ್ಹ ಅಭ್ಯರ್ಥಿಗಳು ನಮ್ಮ ಪಕ್ಷ ಸೇರಬಹುದು. ಕ್ಷೇತ್ರವಾರು ನಾವು ಬಜೆಟ್ ಮಾಡಬೇಕು ಎಂದಿದ್ದೇವೆ. ಹೇಗೆ ಸರ್ಕಾರ ನಡೆಸಬೇಕು ಎಂದೆಲ್ಲ ಪ್ಲಾನ್ ಮಾಡಿಕೊಂಡಿದ್ದೇವೆ. ಮೊದಲ ಹೆಜ್ಜೆಯೆ ನಾವು ಸರಿಯಾಗಿ ಇಡಬೇಕು. ಮೊದಲ ಹೆಜ್ಜೆಯೇ ತಪ್ಪಾಗಿ ಇಟ್ಟರೆ ಕಷ್ಟವಾಗುತ್ತೆ. ಮೊದಲು ಕೇವಲ 10% ಮಾತ್ರ ನಮ್ಮ ಬಗ್ಗೆ ಪ್ರಚಾರ ಆಗಿತ್ತು. ಇದೀಗ ನಮ್ಮ ಸದಸ್ಯರು ಪ್ರತಿ ಹಳ್ಳಿಗೆ ಹೋಗಿ ಪಕ್ಷದ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಇದ್ರಿಂದ ನಮ್ಮ ಪಕ್ಷ ಜನರ ಬಳಿ ತಲುಪುತ್ತಿದೆ ಎಂದರು.
Comments