ಉಪವಾಸ ಕುಳಿತ ಅಭಿಮಾನಿಗೆ ವರ ಕೊಟ್ಟ ಕುಮಾರಣ್ಣ

30 Nov 2017 3:13 PM |
7936 Report

ರವಿಯ ಧರಣಿ ಕುಳಿತ ವಿಚಾರ ತಿಳಿದು ಜೆಡಿಎಸ್ ಮುಖಂಡರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ. ಬಳಿಕ ಧರಣಿ ನಿರತನೊಂದಿಗೂ ಕುಮಾರಸ್ವಾಮಿ ಅವರು ಮಾತನಾಡಿದ್ದು, ಮದುವೆಗೆ ಬರುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಸಂತಸಗೊಂಡ ಯುವಕ ನಿರಶನ ಕೈಬಿಟ್ಟಿದ್ದಾನೆ.

ನನ್ನ ಮದುವೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬರಲೇಬೇಕು' ಎಂದು ಹಠ ಹಿಡಿದು ಯುವಕನೊಬ್ಬ ತನ್ನ ಮನೆಯ ಮುಂದೆಯೇ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ರವಿ ಉಪವಾಸ ಕುಳಿತ ಯುವಕ. ಈತ ಕುಮಾರಸ್ವಾಮಿ ಅವರ ಅಭಿಮಾನಿ. ಡಿ.1ರಂದು ಈತನ ವಿವಾಹ ನಿಗದಿಯಾಗಿದ್ದು `ನನ್ನ ಮದುವೆಗೆ ಕುಮಾರಸ್ವಾಮಿ ಅವರನ್ನು ಕರೆಸಿ' ಎಂದು ಸ್ಥಳೀಯ ಜೆಡಿಎಸ್ ಮುಖಂಡರಿಗೆ ಮನವಿ ಮಾಡಿದ್ದ. ಆದರೆ, ಯಾವ ಮುಖಂಡರೂ ವಾಗ್ದಾನ ನೀಡದಿದ್ದರಿಂದ ಬೇಸತ್ತು `ಮದುವೆಗೆ ಕುಮಾರಸ್ವಾಮಿ ಅವರು ಬರಲೇಬೇಕು' ಎಂದು ಪಟ್ಟು ಹಿಡಿದು ಧರಣಿ ಕುಳಿತಿದ್ದಾನೆ.

Edited By

hdk fans

Reported By

hdk fans

Comments