ಗೋಶಾಲೆಯಲ್ಲಿ ಐವತ್ತು ಲೋಡು ಜೋಳದ ಕಡ್ಡಿ ಸುಟ್ಟು ಭಸ್ಮ
ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯದ ಹತ್ತಿರ ಇರುವ ಗೋಶಾಲೆಯಲ್ಲಿ ಕಿಡಿಗೇಡಿಗಳ ಕೃತ್ಯದಿಂದಾಗಿ ಸುಮಾರು ಐವತ್ತು ಲೋಡು ಜೋಳದ ಕಡ್ಡಿ ಸುಟ್ಟು ಭಸ್ಮವಾಗಿದೆ. ಎರಡು ದಿನಗಳ ಹಿಂದೆ ದೊಡ್ಡಬಳ್ಳಾಪುರ ಮತ್ತು ಸುತ್ತಲ ಹಳ್ಳಿಯ ಹಲವರು ಬಂದು ಇಲ್ಲಿ ಯಾವುದೇ ಕಾರಣಕ್ಕೂ ಗೋಶಾಲೆ ನಡೆಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋದರು, ನೂರಾರು ಗೋವುಗಳ ಆಹಾರವನ್ನು ಸುಟ್ಟಿರುವುದು ಅವರದೇ ಕೆಲಸ ಎಂದು ಗೋಶಾಲೆ ನಡೆಸುತ್ತಿರುವ ಜೀವನ್ ಕುಮಾರ್ ಆರೋಪಿಸಿದರು. ವರದಿ:- ರಾಮಚಂದ್ರ, ಸಂಪಾದಕರು, ವಾಲ್ಮೀಕಿ ಸೇನೆ
Comments