ಆಕಾಶವಾಣಿಯಲ್ಲಿ ಚಿನ್ನದ ಹುಡುಗಿ ಗಾನಶ್ರೀ ಸಂದರ್ಶನ
ದೊಡ್ಡಬಳ್ಳಾಪುರ ನಗರದ ಚಿನ್ನದ ಹುಡುಗಿ ಗಾನಶ್ರೀ ಇತ್ತೀಚೆಗೆ ಛತ್ತೀಸ್ ಘಡ ಮತ್ತು ಧರ್ಮಸ್ಥಳದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಯೋಗಸ್ಪರ್ಧೆಗಳಲ್ಲಿ ಚಿನ್ನದ ಪದಕ ಪಡೆದ ಗಾನಶ್ರೀಯನ್ನು ಅಭಿನಂದಿಸಿ, ಆಕಾಶವಾಣಿ ಬೆಂಗಳೂರು ಎಫ್.ಎಮ್ ರೇಡಿಯೋದಲ್ಲಿ ಇಂದು ಸಂದರ್ಶನ ಪಡೆದುಕೊಳ್ಳಲಾಯಿತು. ದೈಹಿಕ ಶಿಕ್ಷಕರಾದ ಶ್ರೀ ಬಿ.ಜಿ. ಅಮರನಾಥರವರು ಸಂದರ್ಶನದಲ್ಲಿ ಪಾಲ್ಗೊಂಡು ಯೋಗದ ಮಹತ್ವ ವಿವರಿಸಿದರು. ಕಾರ್ಯಕ್ರಮದಲ್ಲಿ ಗಾನಶ್ರೀ ತಂದೆ ತಾಯಿ ಮತ್ತು ಲಕ್ಷ್ಮಿ ಅಮರನಾಥ್ ಕೂಡಾ ಭಾಗವಹಿಸಿದ್ದರು.
Comments