ಸಿಎಂ ತವರೂರಿನಲ್ಲಿ ಕೆಪಿಜೆಪಿ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಲಿರುವ ಉಪ್ಪಿ
ಉಪೇಂದ್ರ ತಮ್ಮ 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ'ಯ ಸುದ್ದಿಗೋಷ್ಠಿಯನ್ನು (ಡಿಸೆಂಬರ್ 1) ಮೈಸೂರಿನ ಪತ್ರಕರ್ತರ ಭವನದಲ್ಲಿ ಆಯೋಜನೆ ಮಾಡಿದ್ದಾರೆ. ಸದ್ಯ ರಾಜಕೀಯ ಕೇಂದ್ರ ಬಿಂದುವಾಗಿರುವ ಮೈಸೂರಿನಲ್ಲಿ ಉಪ್ಪಿ ಪಕ್ಷದ ರಾಜಕೀಯ ಪ್ರಚಾರಕ್ಕೆ ಚಾಲನೆ ಸಿಗಲಿದೆ.
ಈ ಹಿಂದೆ ಸಿನಿಮಾ ಪ್ರಚಾರಕ್ಕೆ ಹಾಗೂ ಚಿತ್ರೀಕರಣಕ್ಕಾಗಿ ಮೈಸೂರಿಗೆ ಬೇಟಿ ನೀಡುತಿದ್ದ ಉಪೇಂದ್ರ ಇದೇ ಪ್ರಥಮಬಾರಿಗೆ ಅಲ್ಲಿ ತಮ್ಮ ಪಕ್ಷದ ಬಗ್ಗೆ ಮಾತನಾಡಲಿದ್ದಾರೆ. ಇಷ್ಟು ದಿನಗಳ ಕಾಲ ಬೆಂಗಳೂರಿನಲ್ಲಿ ಜನರಿಗೆ ತಮ್ಮ ಪಕ್ಷದ ಬಗ್ಗೆ ಮಾಹಿತಿ ತಿಳಿಸಿದ್ದ ಉಪೇಂದ್ರ ಡಿಸೆಂಬರ್ ತಿಂಗಳಿನಿಂದ ಜಿಲ್ಲೆಗಳಿಗೆ ಬೇಟಿ ನೀಡಿ ಅಲ್ಲಿಯ ಜನರನ್ನು ನೇರವಾಗಿ ಬೇಟಿ ಮಾಡಿ ತಮ್ಮ ಪಕ್ಷದ ಅಜೆಂಡಾಗಳನ್ನು ತಿಳಿಸಲಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ತವರಿನಲ್ಲೇ ಉಪ್ಪಿ ಸುದ್ದಿಗೋಷ್ಠಿ ಮಾಡುತ್ತಿರೋದು ಯಾಕೆ..? ಸುದ್ದಿಗೋಷ್ಠಿಯಲ್ಲಿ ಏನೆಲ್ಲಾ ವಿಚಾರಗಳನ್ನು ಅವರು ಚರ್ಚೆ ಮಾಡುತ್ತಾರೆ? ಚಿತ್ರರಂಗದ ಬುದ್ದಿವಂತ ರಾಜಕೀಯದಲ್ಲಿಯೂ ಸ್ಟ್ರಾಟೆಜಿ ಮಾಡುತ್ತಾರಾ? ಹೀಗೆ ಹತ್ತು ಹಲವು ಕುತೂಹಲಗಳು ಹುಟ್ಟುಕೊಂಡಿದ್ದು, ಡಿಸೆಂಬರ್ 1ಕ್ಕೆ ಈ ಎಲ್ಲಾ ಪ್ರಶ್ನೆಗಳಿಗೂ ಖುದ್ದು ಉಪೇಂದ್ರ ಅವರೇ ಉತ್ತರಿಸಲಿದ್ದಾರೆ.
Comments