ಯೋಗೇಶ್ವರ್ ತನ್ನ ತಮ್ಮನಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ : ಡಿಕೆಶಿ ಸವಾಲು

29 Nov 2017 10:45 AM |
1766 Report

ಶಾಸಕ ಸಿ.ಪಿ.ಯೋಗೇಶ್ವರ್‍ಗೆ ಮಾನ, ಮರ್ಯಾದೆ ಇದ್ದರೆ ಅವರ ತಮ್ಮನಿಂದ ಜಿ.ಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು. ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ.

ಆದರೆ, ತಮ್ಮನಿಂದ ರಾಜೀನಾಮೆ ಕೊಡಿಸಿಲ್ಲ. ತಾವು ಹೇಳಿದ್ದೇನೆ. ಅವರು ಕೊಟ್ಟಿಲ್ಲ ಎಂದು ನಾಟಕವಾಡುತ್ತಿದ್ದಾರೆ. ಇವರನ್ನು ನಂಬಿ ನಾವು ಕಾಂಗ್ರೆಸ್ ಸದಸ್ಯರನ್ನು ಕಾಡಿಬೇಡಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರನ್ನಾಗಿ ಮಾಡಿದೆವು. ಕೊಟ್ಟ ಮಾತಿನಂತೆ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜಕೀಯವಾಗಿ ನಾನು ಯಾರನ್ನೂ ದ್ವೇಷಿಸುವುದಿಲ್ಲ.

Edited By

dks fans

Reported By

dks fans

Comments