ರಾಜೀವ್ ಗಾಂದಿ ಬಡಾವಣೆಯ ನಿವಾಸಿಗಳಿಂದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ
ನಗರದ ರಾಜೀವ್ ಗಾಂಧಿ ಬಡಾವಣೆಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸ್ಥಳೀಯ ನಿವಾಸಿಗಳು ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನಪ್ರಿಯ ಮಾಜಿ ಶಾಸಕರಾದ ಜೆ.ನರಸಿಂಹಸ್ವಾಮಿರವರು ಮಹಾಮಂಗಳಾರತಿ ಸ್ವೀಕರಿಸಿ ನೆರೆದಿದ್ದ ಭಕ್ತರಿಗೆ ಸ್ವಾಮಿಯ ಪ್ರಸಾದವನ್ನು ವಿತರಿಸಿದರು. ಇದೇ ಸಂಧರ್ಭದಲ್ಲಿ ನಗರಸಭಾ ಸದಸ್ಯರಾದ ಕಂಬಿ ನಂಜಪ್ಪರವರು, ನಗರಸಭಾ ಸದಸ್ಯರೂ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಯುವ ಮೋರ್ಚ ಅಧ್ಯಕ್ಷರಾದ ಎಚ್.ಎಸ್.ಶಿವಶಂಕರ್ ರವರು, ನಗರ ಬಿಜೆಪಿ ಕಾರ್ಯದರ್ಶಿ ಎಂ.ಕೃಷ್ಣಮೂರ್ತಿರವರು, ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಶಿವುರವರು, ತಾಲ್ಲೂಕು ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಎ.ಮಂಜುನಾಥ್ ರವರು ಸಾರ್ವಜನಿಕರು, ಭಕ್ತಾದಿಗಳು ಹಾಜರಿದ್ದರು.
Comments