ಮಗ್ಗದೂರಿನ ಕಣ್ಣಪ್ಪಗಳು.....ಇವರ ಕಣ್ಣಿಗೆ ಸಾವಿಲ್ಲ

28 Nov 2017 6:53 AM |
459 Report

ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ಬಿನ ಮಾಜಿ ಅಧ್ಯಕ್ಷರು ಮತ್ತು ಲಯನ್ಸ್ ಛಾರಿಟೀಸ್ ಟ್ರಸ್ಟ್ ನ ಉಪಾಧ್ಯಕ್ಷರು ಆದಂತ ಹಿರಿಯ ಲಯನ್ A.ವೆಂಕಟೇಶ್ ಅವರು ೨೭-೧೧-೨೦೧೭ ಸಂಜೆ 6-15 ರಲ್ಲಿ ವಿಧಿವಶರಾಗಿದ್ದಾರೆ.ಶ್ರಿಯುತರ ಕಣ್ಣುಗಳನ್ನು ಅವರ ಕುಟುಂಬದವರು ಡಾ.ರಾಜ್ ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರಕ್ಕೆ ದಾನ ಮಾಡಿ ಸಾವಿನಲ್ಲೂ ಮಾನವೀಯತೆಯನ್ನು ಮೆರೆದಿದ್ದಾರೆ. ಅಗಲಿದ ಅವರ ಆತ್ಮಕ್ಕೆ ಚಿರಶಾಂತಿಯನ್ನು ಮತ್ತು ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬಕ್ಕೆ ನೀಡಲಿ. ಈ ಪವಿತ್ರ ಕಾರ್ಯದಲ್ಲಿ ಭಾಗಿಗಳಾದ ಸ್ವಾಮಿ ವಿವೇಕಾನಂದ ಶಾಲೆಯ ಆರ್.ಲಕ್ಷ್ಮೀನಾರಾಯಣ, ಟಿ.ವಿ.ರವಿ, ಶರತ್ ಬಾಬು, ಅಭಿಷೇಕ್ ನೇತ್ರಧಾಮದ ಡಾ.ಹರೀಶ್ ರವರರಿಗೂ, ಮತ್ತು ನೇತ್ರದಾನದಲ್ಲಿ ಭಾಗಿಗಳಾದ ಕುಟುಂಬದ ಎಲ್ಲಾ ಸದಸ್ಯರಿಗೂ ಭಗವಂತನು ಒಳ್ಳೆಯದನ್ನು ಮಾಡಲಿ.ಇದು ನಮ್ಮ862 ನೇ ನೇತ್ರದಾನ. ವರದಿ:- ನಟರಾಜ್ ನಾಗದಳ,

Edited By

Ramesh

Reported By

Ramesh

Comments