ಶ್ರೀ ಘಾಟಿ ಸುಬ್ರಮಣ್ಯ ಸ್ವಾಮಿ ದೇವಲಯ
"ಶ್ರೀ ಘಾಟಿ ಸುಬ್ರಮಣ್ಯ ಸ್ವಾಮಿ ದೇವಲಯ" ದೊಡ್ಡಬಳ್ಳಾಪುರದಿಂದ ಘಾಟಿ ಸುಬ್ರಮಣ್ಯ ಸ್ವಾಮಿ ದೇವಾಲಯ ಸುಮಾರು 15Km ದೂರದಲ್ಲಿದೆ. ಈ ದೇವಾಲಯಕ್ಕೆ 600 ವರ್ಷಗಳ ಇತಿಹಾಸವಿದೆ. ಒಂದೇ ಮೂರ್ತಿಯಲ್ಲಿ ಎರಡು ದೇವರನ್ನು ಪೂಜಿಸುತ್ತಿರುವ ದೇವಾಲಯಗಳಲ್ಲಿ ಈ ದೇವಾಲಯವು ಒಂದು. ಮುಂದಿನಿಂದ ನೋಡಿದರೆ ನಾವು ಸುಬ್ರಮಣ್ಯಸ್ವಾಮಿಯನ್ನು ಕಾಣಬಹುದು ಮತ್ತು ಹಿಂಭಾಗದಲ್ಲಿ ನರಸಿಂಹಸ್ವಾಮಿಯನ್ನು ಕಾಣಬಹುದು. ಮೂರ್ತಿಯ ಹಿಂಭಾಗದ ನರಸಿಂಹ ಸ್ವಾಮಿಯು ಭಕ್ತಾದಿಗಳಿಗೆ ಕಾಣಿಸುವುದಾಕ್ಕಾಗಿ ಗರ್ಭಗುಡಿಯ ಒಳಗೆ ಕನ್ನಡಿಯನ್ನು ಅಳವಡಿಸಿದ್ದಾರೆ. ಈ ದೇವಾಲಯವು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವನ್ನೇ ಹೋಲುತ್ತದೆ. ಸರ್ಪದೋಷ ನಿವಾರಣೆಗಾಗಿ ಈ ದೇವಾಲಯಕ್ಕೆ ಬರುವವರ ಸಂಖ್ಯೆಯೇ ಹೆಚ್ಚು. ಈ ದೇವಲಯದ ಹತ್ತಿರವೇ ಮಕಾಳಿದುರ್ಗ ಬೆಟ್ಟದ ತಪ್ಪಲಿನಲ್ಲಿಯೇ ಜಲಾಶಯವು ಇದೇ. ದೇವಾಲಯಕ್ಕೆ ಬರುವವರು ಬಹುತೇಕ ಮಂದಿ ಈ ಜಲಾಶಯ ತುಂಬಿ ಹರಿಯುವುದನ್ನು ನೋಡದೆ ಹಿಂದಿರುಗಿ ಹೋಗುವುದಿಲ್ಲ. ಈ ದೇವಾಲಯವನ್ನು ಅಭಿವೃದ್ಧಿ ಪಡಿಸಿದರೆ ಹೆಚ್ಚು ಪ್ರವಾಸಿಗರನ್ನು ಈ ಸ್ಥಳ ಸೆಳೆಯುತ್ತದೆ. ವರದಿ:- ಚೇತನ್ ಕೃಷ್ಣ, ಯುವ ಬ್ರಿಗೇಡ್, ದೊಡ್ಡಬಳ್ಳಾಪುರ. #ನನ್ನ_ಕನಸಿನ_ದೊಡ್ಡಬಳ್ಳಾಪುರ #ನನ್ನ_ಕನಸಿನ_ಕರ್ನಾಟಕ
Comments