ಕೆ.ಎಸ್.ಆರ್.ಟಿ.ಸಿ. ಪ್ರಯಾಣಿಕರ ಸಾರಿಗೆ ಸಮಿತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ
ಸಾಕಷ್ಟು ವರ್ಷಗಳಿಂದ ನಗರದ ಹಳೇ ಬಸ್ ನಿಲ್ದಾಣದಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಮಸ್ಯೆ ತಲೆದೋರುತ್ತಿತ್ತು. ಆದರೆ ಕೆಲವು ತಿಂಗಳಹಿಂದೆ ರೂಪಿಸಲಾದ ಸಾರಿಗೆ ಸಮಿತಿಯ ಸಹಕಾರದಿಂದಾಗಿ ಬಸ್ ಸಮಸ್ಯೆ ಗಣನೀಯವಾಗಿ ಸುಧಾರಣೆ ಕಾಣುತ್ತಿದೆ ಎಂದು ಶಾಸಕರಾದ ಟಿ.ವೆಂಕಟರಮಣಯ್ಯನವರು ಹೇಳಿದರು.
ನಾನು ಶಾಸಕನಾದ ಬಳಿಕ ಕೆಲಯುವಕರು ಬಂದು ಮನವಿ ಪತ್ರಗಳನ್ನು ನೀಡಿದ್ದರು. ಈ ಬಗ್ಗೆ ಬಿ.ಎಂ.ಟಿ.ಸಿ. ಹಾಗೂ ಕೆ.ಎಸ್.ಆರ್.ಟಿ.ಸಿ ಉನ್ನತ ಅಧಿಕಾರಿಗಳೊಂದಿಗೆ ಸಾಕಷ್ಟುಬಾರಿ ಚರ್ಚೆ ಮಾಡೀದರ ಫಲವಾಗಿ ಇದೀಗ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ನಗರದ ಕರಾರಸಾನಿ ವಾಹನ ಘಟಕದಲ್ಲಿ ಸಾರಿಗೆ ಸಮಿತಿಯಿಂದ ನಡೆದ ೨ನೇ ಕನ್ನಡ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಭಾಗೀಯ ಸಂಚಾರ ಅಧಿಕಾರಿ ವೆಂಕಟೆಶ್, ವ್ಯವಸ್ಥಾಪಕ ನರಸಿಂಹರೆಡ್ಡಿ, ತಾಂತ್ರಿಕ ವಿಭಾಗದ ಸೂರ್ಯಕಾಂತ್ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಹಾಜರಿದ್ದರು.
Comments