#ನನ್ನ_ಕನಸಿನ_ದೊಡ್ಡಬಳ್ಳಾಪುರ #ನನ್ನ_ಕನಸಿನ_ಕರ್ನಾಟಕ
"ಮಾಕಳಿದುರ್ಗ ಬೆಟ್ಟ" ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಿಂದ ಸುಮಾರು 20Km ದೂರದಲ್ಲಿರುವ ಬೆಟ್ಟ. ಈ ಬೆಟ್ಟ ಚಾರಣಕ್ಕೆ ಹೇಳಿ ಮಾಡಿಸಿದಂತಹ ಜಾಗದಂತಿದೆ. ಬೆಟ್ಟದ ಮೇಲೆ ನಿಂತರೆ ಸುತ್ತಲಿನ ಹಳ್ಳಿಗಳು, ಹತ್ತಿರದ ಘಾಟಿ ಸುಬ್ರಮಣ್ಯ ಸ್ವಾಮಿ ದೇವಾಲಯ, ತುಂಬಿ ಹರಿಯುವ ಜಲಾಶಯ ಎಲ್ಲವನ್ನೂ ಕಾಣಬಹುದು. ಬೆಂಗಳೂರಿಗೆ ಹತ್ತಿರವಿರುವುದರಿಂದ ತಮ್ಮ ರಜೆ ಸಮಯವನ್ನು ಇಲ್ಲಿ ಕಳೆಯಲು ಬರುವವರ ಸಂಖ್ಯೆಯೇ ಹೆಚ್ಚು. ಈ ಜಾಗವನ್ನು ಅಭಿವೃದ್ಧಿ ಪಡಿಸಿದರೆ ಒಂದು ಉತ್ತಮ ಪ್ರವಾಸಿ ಸ್ಥಳವಾಗತ್ತದೆ. #ನನ್ನ_ಕನಸಿನ_ದೊಡ್ಡಬಳ್ಳಾಪುರ #ನನ್ನ_ಕನಸಿನ_ಕರ್ನಾಟಕ ವರದಿ:- ಚೇತನ್ ಕೃಷ್ಣ, ಯುವ ಬ್ರಿಗೇಡ್, ದೊಡ್ಡಬಳ್ಳಾಪುರ.
Comments