ಯಾರಾಗಲಿದ್ದಾರೆ ತಾಲ್ಲೂಕಿನ ಮುಂದಿನ ಧಣಿ? ಭಾಗ-೩
ಬರಲಿರುವ ಚುನಾವಣೆಗೆ ಅಭ್ಯರ್ಥಿಗಳಾರು ಎಂಬುದು ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಇಂದ ಹಾಲಿ ಶಾಸಕರಿಗೆ ಟಿಕೇಟ್ ಎಂಬುದು ಶಾಸಕರ ಬೆಂಬಲಿಗರ ಆತ್ಮ ವಿಶ್ವಾಸ. ಹಳೇ ಕಾಂಗ್ರೆಸ್ಸಿಗರು, ಹಿರಿಯ ಮುಖಂಡ, ಸಜ್ಜನ, ಕೈ ಬಾಯಿ ಶುದ್ಧವಾಗಿಟ್ಟು ಕೊಂಡಿರುವ ಸಿ.ಡಿ. ಸತ್ಯನಾರಾಯಣಗೌಡರ ಬಗ್ಗೆ ಇಂದಿಗೂ ಅನೇಕರಿಗೆ ಒಲವಿದೆ. ಮರದಾರರು ಸಹ ಗೌಡರನ್ನು ವಿರೋಧಿಸಲು ಯಾವುದೇ ಕಾರಣಗಳಿಲ್ಲ. ಕೋಟಿಗೆ ಎಷ್ಟು ಸೊನ್ನೆಗಳೆಂದು ತಿಳಿಯದ ಜನರಿಗೆ ಸಾವಿರಾರು ಕೋಟಿಗಳ ಗಿಳಿ ಪಾಠ ಒಪ್ಪಿಸುವ ಸರದಾರರ ಬಗ್ಗೆ ಭ್ರಮನಿರಸನವಾಗಿದೆ. ಇದುವರೆವಿಗೂ ಬಲಗೈಲಿ ನೀಡಿದ್ದನ್ನು ಎಡಗೈಗೂ ಗೊತ್ತಿಲ್ಲದ, ಮಾಡಿದ ಸಾಧನೆಗಳ ಬಗ್ಗೆ ಎಲ್ಲೂ ಹೇಳಿಕೊಳ್ಳದ ಸರಳತೆ, ಸೌಜನ್ಯಗಳಿಗೆ ಹೆಸರಾಗಿ ಸೋಲಿನ ಬಗ್ಗೆ ಇಂದಿಗೂ ಜನರಿಂದ ಅನುಕಂಪ ಗಳಿಸಿತ್ತಿರುವ, ವ್ಯಕ್ತಿತ್ವದಲ್ಲಿ ಒಂದು ಕೈ ಮೇಲಾಗಿರುವವರ ಬಗ್ಗೆ ಮತದಾರರಲ್ಲಿ ಅದೇ ಆದರ, ಅಭಿಮಾನವಿದೆ. ಸೋತರೂ ಎಂದೂ ಮತದಾರರ ಬಗ್ಗೆ ಅಸಮಧಾನ ವ್ಯಕತಪಡಿಸದವರ ಬಗ್ಗೆ ಗೌರವವಿದೆ.
ಎಲ್ಲಿಂದಲೋ ಬಂದು ಮೊದ ಮೊದಲು ದಾನ, ಧರ್ಮ ಎಂದು ಹೆಸರಾಗಿ, ಸೋತಕೂಡಲೇ ಅದೇ ದಾನ ಧರ್ಮದ ಭಾವನೆಯಿಂದ ಹೋದವರನ್ನು ನಿಕೃಷ್ಠವಾಗಿ ಗಂಟೆಗಟ್ಲೆ ಕಾಯಿಸಿ, ಅಸಮಧಾನಗಳನ್ನು ಹೋದವರ ಮುಂದೆಯೇ ವ್ಯಕ್ತಪಡಿಸಿ, ಸಮಯ ಪ್ರಜ್ಞೆ ಇಲ್ಲದ, ಸಮಯಪಾಲನೆ ಗೊತ್ತಿಲ್ಲದವರ ಬಗೆಗಿನ ಭಾವನೆಗಳು ಅರ್ಧಕ್ಕರ್ಧ ಈಗಿಲ್ಲ. ಕೊಡುತ್ತೇವೆಂದರೆ ಕೊಡಬೇಕು, ಇಲ್ಲವೇ ಇಲ್ಲವೆಂದು ನೇರವಾಗಿ ಹೇಳುವ ವ್ಯಕ್ತಿತ್ವವನ್ನು ಬದಲಾಯಿಸಿಕೊಂಡವರನ್ನು ಮತದಾರ ಚೆನ್ನಾಗಿ ಅರಿತಿರುವುದರಿಂದ ಬಂದದಾರಿಗೆ ಈ ಸಾರಿಯೂ ಸುಂಕವಿಲ್ಲವೆಂದು ವಾಪಸ್ ಹೋಗುವುದು ಅನಿವಾರ್ಯ.
ವರದಿ:- ಎಂ.ಜೆ.ರಾಜಶೇಕರ ಶೆಟ್ಟಿ, ಸಂಪಾದಕರು. ಹಾಯ್ ದೊಡ್ಡಬಳ್ಳಾಪುರ.
Comments