ಕೆಜೆಪಿ ಸದಸ್ಯರನ್ನು ಪಕ್ಷದ ಕೆಲಸದಲ್ಲಿ ತೊಡಗಿಸಲು ಉಪ್ಪಿ ಮಾಸ್ಟರ್ ಪ್ಲಾನ್

ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ವಾರ್ಟ್ ಅಪ್ ಗ್ರೂಪ್ ಸದಸ್ಯರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಜೊತೆಗೆ ''ಪ್ರಜಾಕೀಯ ವಾಟ್ಸಪ್ ಗ್ರೂಪ್ ಹೆಸರು, ಅಡ್ಮಿನ್ ಹೆಸರು ಮತ್ತು ಮೊಬೈಲ್ ನಂಬರ್ ಹಾಗೂ ನಿಮ್ಮ ಜಿಲ್ಲೆಯ ವಿವರಗಳನ್ನು ಶೇರ್ ಮಾಡಿ.'' ಎಂದು ಹೇಳಿದ್ದಾರೆ.
ಉಪೇಂದ್ರ ಸದ್ಯ ತಮ್ಮ ಪ್ರಜಾಕೀಯ ಚಿಂತನೆಯ 'KPJP' ಪಕ್ಷದ ಕೆಲಸದಲ್ಲಿ ತೊಡಗಿದ್ದಾರೆ. ಇತ್ತೀಚಿಗಷ್ಟೆ 'ಕೆ.ಪಿ.ಜೆ.ಪಿ' ಪಕ್ಷದ ವೆಬ್ ಸೈಟ್ ಮತ್ತು ಅಪ್ ಲಾಂಚ್ ಮಾಡಿದ್ದ ಉಪ್ಪಿ ಈಗ ತಮ್ಮ ಪಕ್ಷದ ವಾಟ್ಸಪ್ ಗ್ರೂಪ್ ಸದಸ್ಯರನ್ನು ಭೇಟಿ ಮಾಡಲಿದ್ದಾರೆ. ಈ ಹಿಂದೆಯೇ ಹೇಳಿದಂತೆ ಉಪೇಂದ್ರ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಮೂಲಕ ತಮ್ಮ ಪ್ರಜಾಕೀಯ ಅಂಶಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ. ರಾಜ್ಯ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದು ಉಪ್ಪಿ ಮತ್ತು ಪ್ರಜಾಕೀಯ ಬೆಂಬಲಿಗರ ಕೆಲಸದಲ್ಲಿ ವೇಗ ಹೆಚ್ಚಾಗಿದೆ.
Comments