ಮಹರ್ಷಿ ಡಾ|| ಶ್ರೀ ಶ್ರೀ ಆನಂದ ಗುರೂಜಿ ರವರ ದಿವ್ಯಸಾನಿಧ್ಯದಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ಶನೇಶ್ಚರಮಹಾಯಜ್ಞ
ದೊಡ್ಡಬಳ್ಳಾಪುರದ ನಗರದಲ್ಲಿರುವ ಶ್ರೀ ಆರ್.ಎಲ್.ಜಾಲಪ್ಪ ಇಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ ಕಲಾಮಂದಿರದಲ್ಲಿ ಮಹರ್ಷಿ ಡಾ|| ಶ್ರೀ ಶ್ರೀ ಆನಂದ ಗುರೂಜಿ ರವರ ದಿವ್ಯಸಾನಿಧ್ಯದಲ್ಲಿ ವಿಜೃಂಭಣೆಯಿಂದ ಶ್ರೀ ಶನೇಶ್ಚರಮಹಾಯಜ್ಞ ನಡೆಯಿತು. ದೂರದ ಗುಲ್ಬರ್ಗಾ, ರಾಯಚೂರು, ಹುಬ್ಬಳ್ಳಿ, ಬೆಳಗಾವಿ, ಚಿತ್ರದುರ್ಗ, ಮಂಗಳೂರು ಸೇರಿದಂತೆ ಕರ್ನಾಟಕದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಆಗಮಿಕರಾದ ವಿದ್ವಾನ್ ಜಿ. ಶ್ರೀನಿವಾಸ ರಾಘವನ್ [ಪಾಂಚರಾತ್ರಾಗಮ ಪ್ರವೀಣರು] ಮತ್ತು ವೃಂದದವರು ಮಹಾಯಜ್ಞವನ್ನು ನೆರವೇರಿಸಿಕೊಟ್ಟರು. ಕಾರ್ಯಕ್ರಮವನ್ನು ಶ್ರೀ ಶ್ರೀ ಶ್ರೀ ಮುತ್ಯಾಲಮ್ಮ ದೇವಸ್ಥಾನದ ಆಡಳಿತ ಮಂಡಾಳಿ ಸೇವಾ ಅಭಿವೃದ್ಧಿ ಟ್ರಸ್ಟ್ [ರಿ.] ಇವರು ಆಯೋಜಿಸಿದ್ದರು.
Comments