ಯಾರಾಗಲಿದ್ದಾರೆ ತಾಲ್ಲೂಕಿನ ಮುಂದಿನ ಧಣಿ ಭಾಗ-೨




ತಾಲ್ಲೂಕಿನ ಮಟ್ಟಿಗೆ ವಿಶ್ಲೇಷಿಸುವುದಾದರೆ ಈ ಸಾರಿಯ ಫಲಿತಾಂಶ ಭಿನ್ನ, ಕಳೆದ ಸಾರಿಯಂತೆ ಅನಿರೀಕ್ಷಿತವಾದರೂ ಅಚ್ಚರಿ ಪಡಬೇಕಾಗಿಲ್ಲ. ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಯಾರೂ ಸ್ವತಹ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ವೆಂಕಟರಮಣಯ್ಯನವರು ಕೂಡಾ ನಿರೀಕ್ಷಿಸದಿದ್ದ ಬಂಪರ್ ಫಲಿತಾಂಶ ಇಂದಿಗೂ ಅನೇಕರಿಗೆ ನಂಬಲಾಗಿತ್ತಿಲ್ಲ ಗ್ರಾಮ ಪಂಚಾಯಿತಿ ಸದಸ್ಯರೂ ಅಲ್ಲದ ಯಾವುದೇ ಆಡಳಿತದ ಗಂಧ ಗಾಳಿ ಇಲ್ಲದ ಪಕ್ಕಾ ವ್ಯಾಪಾರಿ ಮನೋಭಾವದ ವೆಂಕಟರಮಣಯ್ಯನವರು ಗೆದ್ದಿದ್ದು ಪಕ್ಷದಿಂದಾಗಲಿ, ಅವರ ವ್ಯಕ್ತಿತ್ವದಿಂದಾಗಲಿ ಇನ್ನಾವುದೋ ಕಾರಣದಿಂದಾಗಲಿ ಗೆದ್ದಿಲ್ಲ. ೨೦೧೩ರ ಸನ್ನಿವೇಶದಲ್ಲಿ ನಗರಸಭಾ ತಿಮ್ಮಣ್ಣ ನಿಂತಿದ್ದರೂ ಗೆಲ್ಲುತ್ತಿದ್ದರು. ಖಚಿತವಾಗಿ ಜೆಡಿಎಸ್ ಟಿಕೇಟ್ ಸಿಕ್ಕೇಸಿಗುತ್ತದೆ ಎಂದು ಇನ್ನಿಲ್ಲದ ಸರ್ಕಸ್, ದಾನ, ಧರ್ಮ, ನೀರು ಕುಡಿಸುವುದರ ಮೂಲಕ ಅನುಕಂಪದ ಅಲೆಯಲ್ಲಿ ಗೆಲ್ಲುವ ಭರವಸೆ ಹೊಂದಿದ್ದ ತಾಲ್ಲೂಕಿಗೆ ಸಂಭಂದವೇ ಇಲ್ಲದಿದ್ದ ಮುನೇಗೌಡರನ್ನು ಹಿಂದಿಕ್ಕಿ ಮಾಜಿ ಸಚಿವ ಚನ್ನಿಗಪ್ಪ ಜೆಡಿಎಸ್ ಅಭ್ಯರ್ಥಿಯಾಗಿ, ಮುನೇಗೌಡರು ಜೆಡಿಎಸ್ ಬಂಡಾಯ ಅಭ್ಯರ್ಥಿಯಾದಾಗಲೇ ನರಸಿಂಹಸ್ವಾಮಿ ಗೆಲುವು ಅನಾಯಾಸವೆಂದೆ ಖಚಿತವಾಗಿತ್ತು.
ಆದರೆ ನರಸಿಂಹಸ್ವಾಮಿಯವರ ಬಗೆಗಿಂತ ಅವರ ಕೆಲವು ಬೆಂಬಲಿಗರ ಮೇಲಿನ ಸಿಟ್ಟು, ನಡೆ, ನುಡಿ, ವ್ಯಕ್ತಿತ್ವ ಕುಟುಂಬದವರ ಬೇಜವಾಬ್ದಾರಿ ಗೆದ್ದೇ ಗೆಲ್ಲುವ ಭರವಸೆಯಿಂದ ಸ್ವಲ್ಪ ಯಾಮಾರಿದ ಫಲ ಚನ್ನಿಗಪ್ಪ, ಮುನೇಗೌಡ ಜಗಳದಲ್ಲಿ ಕಾಂಗ್ರೆಸ್ ಕನಸಿನಲ್ಲೂ ನಿರೀಕ್ಷಿಸದಿದ್ದ ವೆಂಕಟರಮಣಯ್ಯ ಗೆದ್ದರು. ಅನಿರೀಕ್ಷಿತ ಗೆಲುವನ್ನು ನಿರಂತರ ಮಾಡಿಕೊಳ್ಳುವ ಪ್ರಯತ್ನದ ಬದಲು ಶಾಸಕರು ಭಿನ್ನ ಚಿಂತನೆ ನೆಡೆಸಿದರ ಫಲ ಹಿಂದಿನ ಗೆಲುವನ್ನು ಕಾಂಗ್ರೆಸ್ ಈಗ ನಿರೀಕ್ಷಿಸುವ ಸ್ಥಿತಿಯಲ್ಲಿ ಇಲ್ಲ.
ಮುಂದುವರೆಯುವುದು......
ವರದಿ:- ಎಂ.ಜೆ. ರಾಜಶೇಕರ ಶೆಟ್ಟಿ, ಸಂಪಾದಕರು. ಹಾಯ್ ದೊಡ್ಡಬಳ್ಳಾಪುರ.
Comments