ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ
ದೊಡ್ಡಬಳ್ಳಾಪುರ ತಾಲ್ಲೂಕು, ಮಧುರೆ ಹೋಬಳಿಯ ಬೀರಯ್ಯನಪಾಳ್ಯ ಗ್ರಾಮದಲ್ಲಿ "ಜಾಗೃತಿ ಕ್ರಿಕೆಟ್ ಕ್ಲಬ್" ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಗಳಿಗೆ ಧ್ವಜಾರೋಹಣ ಮಾಡಿ, ಕ್ರಿಕೆಟ್ ಆಡುವುದರ ಮೂಲಕ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡಿದ ಜನಪ್ರಿಯ ಮಾಜಿ ಶಾಸಕರಾದ ಜೆ.ನರಸಿಂಹಸ್ವಾಮಿರವರು ಕ್ರೀಡೆಗೆ ಯಾವುದೇ ಭಾಷೆ, ಜಾತಿ, ಧರ್ಮದ ಹಂಗಿಲ್ಲ. ಇಂದು ಕ್ರೀಡಾ ಕ್ಷೇತ್ರದಲ್ಲೂ ಹಲವಾರು ಸಾಧನೆ ಮಾಡುವ ಅವಕಾಶಗಳಿದ್ದು, ಮಕ್ಕಳು, ಯುವಕರು ಹಾಗೂ ಪೋಷಕರು ಕ್ರೀಡೆಯ ಕಡೆಗೆ ಆಸಕ್ತಿ ತೋರಿಸಬೇಕೇಂದು ಹೇಳಿದರು.ಈ ಸಂಧರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಸಿ.ನಾರಾಯಣಸ್ವಾಮಿರವರು, ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಜೆ.ನಾಗರಾಜ್ ರವರು, ನಗರ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಬಂತಿ ವೆಂಕಟೇಶ್ ಗೌಡರವರು,ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮನು ಜಾಗೃತಿ ಕ್ಲಬ್ ಸದಸ್ಯರು, ವಿವಿಧ ತಂಡಗಳ ಆಟಗಾರರು, ಗ್ರಾಮಸ್ಥರು ಹಾಜರಿದ್ದರು
Comments