ಯಾರಾಗಲಿದ್ದಾರೆ ತಾಲ್ಲೂಕಿನ ಮುಂದಿನ ಧಣಿ
ಯಾರಾಗಲಿದ್ದಾರೆ ತಾಲ್ಲೂಕಿನ ಮುಂದಿನ ಧಣಿ? ಕಾಂಗ್ರೆಸ್ ನಿಂದ ಸತ್ಯನಾರಾಯಣಾಗೌಡ + ವೆಂಕಟರಮಣಯ್ಯ? ಬಿ.ಜೆ.ಪಿ.ಯಿಂದ ನರಸಿಂಹಸ್ವಾಮಿ? ಜೆ.ಡಿ.ಎಸ್.ನಿಂದ ಮುನೇಗೌಡ?
ರಾಜ್ಯ ವಿಧಾನಸಭಾ ಚುನಾವಣೆ ಹೊಸಲಲ್ಲಿದೆ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮದೇ ತತ್ವ ಸಿದ್ಧಾಂತ, ಸಾಧನೆಗಳ ಮೂಲಕ ಮತದಾರರ ಮನಗೆಲ್ಲಲು ಭರ್ಜರಿ ಸಿದ್ದತೆಯಲ್ಲಿ ತೊಡಗಿವೆ. ಎಲ್ಲಾ ಪಕ್ಷಗಳು ಗೆಲ್ಲುವ ಅಭ್ಯರ್ಥಿಗಳ ತಲಾಷೆ, ಸಮೀಕ್ಷೆ, ಜನಾಭಿಪ್ರಾಯಗಳ ಮೂಲಕ ಹತ್ತು ಹಲವು ಕೋನಗಳಲ್ಲಿ ಚಿಂತನೆ ನಡೆಸಿವೆ. ಇಡೀ ದೇಶದಲ್ಲಿ ಅಪ್ರಸ್ತುತವಾಗುತ್ತಿರುವ ಕಾಂಗ್ರೆಸ್ ಗೆ ಕರ್ನಾಟಕ ಪ್ರತಿಷ್ಠೆಯ, ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಕೇಂದ್ರ ಸೇರಿ ಹಲವಾರು ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಗೆ ಕಳೆದುಕೊಂಡ ಗದ್ದುಗೆ ಹಿಡಿಯುವ, ದಕ್ಷಿಣ ಭಾರತದ ಹೆಬ್ಬಾಗಿಲಿನಲ್ಲಿ ಪ್ರವೇಶಿಸುವ ತವಕ, ಗೆದ್ದೇ ಗೆಲ್ಲುವುದಾಗಿ ಸಾರುತ್ತಿರುವ ಜೆಡಿಎಸ್, ಗೆದ್ದರೆ ಬಂಪರ್ ಆಫರ್, ಸೋತರೆ ನಷ್ಟವೇನಿಲ್ಲ, ಮತದಾರರಿಗೆ ಈಗ ರಾಜಕೀಯ ಪಕ್ಷಗಳ ಮೇಲೆ ಭರವಸೆಯಿಲ್ಲ. ಎಲ್ಲರೂ ಅವರೇ ಎಂಬ ಸಿನಿಕತನ ಮನೆಮಾಡಿದೆ. ಎಲ್ಲೋ ಮೂಲೆಯಲ್ಲಿ ಇಂತಹ ಪಕ್ಷ, ವ್ಯಕ್ತಿ ಬೇಕೆಂಬ ನಿರೀಕ್ಷೆ ಇದೆ.
ಮುಂದುವರೆಯುವುದು......
ವರದಿ:- ಎಂ.ಜೆ.ರಾಜಶೇಕರ ಶೆಟ್ಟಿ. ಸಂಪಾದಕರು, ಹಾಯ್ ದೊಡ್ಡಬಳ್ಳಾಪುರ.
Comments