ಬೀಳಗಿ ಮತ ಕ್ಷೇತ್ರದಿಂದ ಬಿಜೆಪಿಗೆ ಸೆಡ್ಡು ಹೊಡೆಯಲು ಜೆಡಿಎಸ್ ರಣತಂತ್ರ

ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಗ್ರಾಮದ ಬಳಿ ಇರುವ ರಾಮಾರೂಢ ಮಠದ ಶ್ರೀ ಪರಮರಾಮಾರೂಢ ಸ್ವಾಮೀಜಿ ಈಗ ಜೆಡಿಎಸ್ ಕಡೆ ಕಣ್ಣಾಯಿಸಿದ್ದಾರೆ.
ಸ್ವಾಮೀಜಿ ಮನವಿಗೆ ಬಿಜೆಪಿ ನಾಯಕರು ನಿರ್ಲಕ್ಷ್ಯ ತೋರಿದ ಹಿನ್ನೆಲೆ ಜೆಡಿಎಸ್‌ಗೆ ಸೇರಲು ನಿರ್ಧರಿಸಿದ್ದಾರೆ.ಡಿ.29 ರಂದು ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಗೆ ನಿರ್ಧಾರ ಮಾಡಲಾಗಿದ್ದು, ಬೀಳಗಿ ಮತ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ವಾಮೀಜಿ ಕಣಕ್ಕೆ ಇಳಿಯಲಿದ್ದಾರೆ.ಕಳೆದ 4 ತಿಂಗಳಿಂದ 130 ಹಳ್ಳಿಗಳಲ್ಲಿ ಸ್ವಾಮೀಜಿ ರಾಜಕೀಯ ಜನ ಜಾಗೃತಿ ಮೂಡಿಸುವತ್ತ ಕಾರ್ಯ ಪ್ರವೃತ್ತರಾಗಿದ್ದರು. ಬಿಜೆಪಿಯ ಮಾಜಿ ಸಚಿವ ಮುರುಗೇಶ ನಿರಾಣಿ ವಿರುದ್ಧ ಸ್ಫರ್ಧೆಗೆ ಸಜ್ಜಾಗಿದ್ದಾರೆ.
Comments