ಶ್ರೀ ಮುತ್ಯಾಲಮ್ಮ ದೇವಸ್ಥಾನದ ಆಡಳಿತ ಮಂಡಳಿ ಸೇವಾ ಟ್ರಸ್ಟ್ [ರಿ.] ಇವರ ವತಿಯಿಂದ ಮಹರ್ಷಿ ಶ್ರೀ ಆನಂದ ಗುರೂಜಿ ದಿವ್ಯ ಸಾನಿದ್ಯದಲ್ಲಿ ಶ್ರೀ ಶನೇಶ್ಚರಮಹಾಯಜ್ಞ.



ದಿನಾಂಕ ೨೫-೧೧-೨೦೧೭ನೇ ಶನಿವಾರ ಬೆಳಿಗ್ಗೆ ೮ ಘಂಟೆಗೆ ಲೋಕ ಕಲ್ಯಾಣಾರ್ಥವಾಗಿ ಮಹರ್ಷಿ ಶ್ರೀ ಆನಂದ ಗುರೂಜಿ [ಬ್ರಹ್ಮರ್ಷಿ ಆನಂದ ಸಿದ್ದಿ ಪೀಠಂ] ರವರ ದಿವ್ಯ ಸಾನಿದ್ಯದಲ್ಲಿ ಶ್ರೀ ಶನೇಶ್ಚರಮಹಾಯಜ್ಞವನ್ನು ಭಕ್ತಾದಿಗಳಿಗೆ ಸಂಭವಿಸುವ ಸಂಕಷ್ಟಗಳನ್ನು ದೂರಮಾಡುವ ಸಲುವಾಗಿ ಆದಿತ್ಯಾದಿ ನವಗ್ರಹಗಳು ಸಮಸ್ತ ಜನರಿಗೂ ಒಳ್ಳೆಯದನ್ನು ಉಂಟು ಮಾಡಿ ಶ್ರೇಯೋ ಅಭಿವೃದ್ಧಿಗಾಗಿ ಬೃಹತ್ ಶ್ರೀ ಶನೇಶ್ಚರಮಹಾಯಜ್ಞವನ್ನು ದೊಡ್ಡಬಳ್ಳಾಪುರದ ಶ್ರೀ ಆರ್.ಎಲ್.ಜಾಲಪ್ಪ ಇಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಶನೇಶ್ಚರ ಸ್ವಾಮಿ ಕೃಪೆಗೆ ಪಾತ್ರರಾಗಲು ಕೋರಿದೆ. ಹೆಚ್ಚಿನ ಮಾಹಿತಿಗೆ: ಹೆಚ್.ನಾಗರಾಜು, ಅಧ್ಯಕ್ಷರು, ಶ್ರೀ ಮುತ್ಯಾಲಮ್ಮ ದೇವಸ್ಥಾನದ ಸೇವಾ ಟ್ರಸ್ಟ್. ಮೊ. ೭೯೭೫೦೪೧೯೦೦
Comments