ನೇತ್ರ ದಾನಿಗಳಿಗೆ ಸನ್ಮಾನ, ವಿಶಿಷ್ಠವಾಗಿ ಆಚರಿಸಿದ ಮಕ್ಕಳ ದಿನಾಚರಣೆ






ನಗರದಲ್ಲಿರುವ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ನೇತ್ರ ದಾನಿಗಳಿಗೆ ಸನ್ಮಾನ ಮಾಡುವುದರ ಮೂಲಕ ವಿಶಿಷ್ಠವಾಗಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ನೇತ್ರದಾನಿಗಳ ಕುಟುಂಬದವರಾದ ಶ್ರೀಮತಿ ಪಾರ್ವತಮ್ಮ, ಕೆ.ವಿ. ಪ್ರಶಾಂತ್, ದೊಡ್ಡಬಳ್ಳಾಪುರ ನಗರ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಜಿ. ಆಶೋಕ್, ಭಾಗವಹಿಸಿದ್ದರು. ನಾಗದಳ ಅಧ್ಯಕ್ಷರಾದ ಬದ್ರಿನಾಥ್ ವಿದ್ಯಾರ್ಥಿಗಳಿಗೆ ನೇತ್ರದಾನದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿಯವರಾದ ಎಂ.ಬಿ.ಗುರುದೇವ, ನೇತ್ರದಾನ ತಂಡದ ಆರ್, ಲಕ್ಷ್ಮಿನಾರಾಯಣ, ಟಿ,ವಿ, ರವಿ, ಶರತ್ ಬಾಬು, ವೆಂಕಟಲಕ್ಷ್ಮಮ್ಮ, ಪ್ರಿಯಾಂಕ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ ರವರು ಭಾಗವಹಿಸಿದ್ದರು.
Comments