ಏಪ್ರಿಲ್ ೧೧ರಿಂದ ಗೀತಂ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ-2018





ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್ವೆುಂಟ್ (ಗೀತಂ) ಬಿ.ಟೆಕ್, ಎಂ.ಟೆಕ್ ಮತ್ತು ಫಾರ್ಮಸಿ ಕೋರ್ಸ್ಗಳ ಪ್ರವೇಶಕ್ಕೆ ನಡೆಸುವ ಪ್ರವೇಶಪರೀಕ್ಷೆ ‘ಜಿಎಟಿ-2018’ಗೆ ಅರ್ಜಿ ಆಹ್ವಾನಿಸಿದೆ. ಅರ್ಜಿಗಳು ಬುಧವಾರದಿಂದಲೇ ಆನ್ಲೈನ್ ಮತ್ತು ನೇರ ಮಾದರಿಯಲ್ಲಿ ದೊರೆಯಲಿದೆ. ಪರೀಕ್ಷೆಯು ವಿಶಾಖಪಟ್ಟಣ, ಹೈದರಾಬಾದ್ ಮತ್ತು ಬೆಂಗಳೂರು ಕ್ಯಾಂಪಸ್ನಲ್ಲಿರುವ ಕಾಲೇಜು ಪ್ರವೇಶಕ್ಕಾಗಿ ನಡೆಯಲಿದ್ದು, ಮಾ.26ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಸ್ಲಾಟ್ ಬುಕಿಂಗ್ಗೆ ಏ.5ರಿಂದ 8ರವರೆಗೆ ಅವಕಾಶ ಕಲ್ಪಿಸಲಾಗುತ್ತದೆ.
ಏ.5ರ ನಂತರ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು, ಏ.11ರಿಂದ 26ರವರೆಗೆ ವಿವಿಧ ಕೇಂದ್ರಗಳಲ್ಲಿ ಆನ್ಲೈನ್ನಲ್ಲಿ ಪರೀಕ್ಷೆ ನಡೆಯಲಿದೆ. ಏ.30 ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಗೀತಂ ವಿವಿ ಕುಲಪತಿ ಪಿ.ವಿ. ಶಿವಪುಲ್ಲಯ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿ.ಟೆಕ್ ಮತ್ತು ಎಂ.ಟೆಕ್ನಲ್ಲಿ ಎಲೆಕ್ಟ್ರಾನಿಕ್ ಕಮ್ಯೂನಿಕೇಷನ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್ ಕೋರ್ಸ್ ಪ್ರಾರಂಭಿಸಲಾಗಿದೆ. 17 ಎಂ.ಟೆಕ್ ಕೋರ್ಸ್ಗಳನ್ನು ವಿಶಾಖಪಟ್ಟಣ ಕ್ಯಾಂಪಸ್ ಮತ್ತು 5 ಎಂ.ಟೆಕ್ ಕೋರ್ಸ್ಗಳು ಹೈದರಾಬಾದ್ ಮತ್ತು ಬೆಂಗಳೂರು ಕ್ಯಾಂಪಸ್ನಲ್ಲಿವೆ. ಕಳೆದ 10 ವರ್ಷಗಳಿಂದ ಪರೀಕ್ಷೆ ನಡೆಸಲಾಗುತ್ತಿದೆ. ತಾಂತ್ರಿಕ ಕೋರ್ಸ್ಗಳಿಗೆ ಮಾತ್ರವಲ್ಲದೆ, ಸ್ನಾತಕೋತ್ತರ ಫಾರ್ಮಸಿ ಕೋರ್ಸ್ಗಳ ಪ್ರವೇಶಕ್ಕೂ ಪರೀಕ್ಷೆ ನಡೆಸಲಾಗುತ್ತಿದೆ. 2018ನೇ ಸಾಲಿನ ಜಿಎಟಿ ಪರೀಕ್ಷೆ 48 ನಗರಗಳಲ್ಲಿನ 48 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.
Comments