ವಿಜೃಂಭಣೆಯಿಂದ ನಡೆದ ಶ್ರೀ ಪ್ರಸನ್ನ ಚಂದ್ರಮೌಳೇಶ್ವರಸ್ವಾಮಿ ರಥೋತ್ಸವ




ಕಡೆಯ ಕಾರ್ತೀಕ ಸೋಮವಾರದಂದು ದೊಡ್ಡಬಳ್ಳಾಪುರದ ಪ್ರಸಿದ್ದ ದೇವಸ್ಥಾನದ ಶ್ರೀ ಪ್ರಸನ್ನ ಚಂದ್ರಮೌಳೇಶ್ವರಸ್ವಾಮಿಯವರ ಬ್ರಹ್ಮ ರಥೋತ್ಸವ ನಡೆಯಿತು. ರಥೋತ್ಸವದ ಅಂಗವಾಗಿ ಎರಡು ದಿನಗಳ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ನಗರದ ನಾಗರೀಕರು ರಥಕ್ಕೆ ಬಾಳೇಹಣ್ಣು ಧವನ ಸಮರ್ಪಿಸಿ ಭಕ್ತಿಬಾವ ಮೆರೆದರು. ನಗರದ ನಂದಿಗಿರಿ ಪ್ರದಕ್ಷಿಣಾ ಸೇವಾ ಟ್ರಸ್ಟ್ ವತಿಯಿಂದ ಮಜ್ಜಿಗೆ, ಪಾನಕ, ಕೋಸಂಬರಿ ಅರವಂಟಿಗೆಯನ್ನು ಏರ್ಪಡಿಸಲಾಗಿತ್ತು. ಕಡೆಯ ಸೋಮವಾರದ ಪ್ರಯುಕ್ತ ಊರಿನ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಬಯಲು ಬಸವಣ್ಣ ದೇವಸ್ಥಾನದಲ್ಲಿ ಕಡಲೆಕಾಯಿಪರಿಷೆ ಏರ್ಪಡಿಸಲಾಗಿತ್ತು. ಶ್ರೀ ರಾಮಲಿಂಗ ಚಂದ್ರಚೌಡೇಶ್ವರಿ ದೇವಸ್ಥಾನದಲ್ಲಿ ಬಸವಣ್ಣ ಸೇವಾ ಸಮಿತಿಯವರಿಂದ ಯಶಸ್ವಿ ೨೯ನೇ ವರ್ಷದ ವಿಶೇಷ ಅಲಂಕಾರ ಎರ್ಪಡಿಸಲಾಗಿತ್ತು.
Comments