ಮಹಿಳಾ ಸಮಾಜದಲ್ಲಿ ಅವ್ಯವಹಾರ ನಡೆದಿಲ್ಲಾ ಡಿಸೆಂಬರ್ ೨ರಂದು ಸರ್ವಸದಸ್ಯರ ಸಭೆ, ೩ಕ್ಕೆ ಚುನಾವಣೆ ನಡೆಯಲಿದೆ ಎಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ಎಲ್.ಸಿ. ದೇವಕಿ ತಿಳಿಸಿದರು.



ಕೆಲವು ಸದಸ್ಯರು ಸಮಾಜದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದು, ಇದಕ್ಕೆ ಸೂಕ್ತ ದಾಖಲೆ ಇದ್ದರೆ ಸಾಬೀತು ಪಡಿಸಬೇಕು, ಕಾನೂನು ಪ್ರಕಾರವೇ ಚುನಾವಣೆ ನಡೆಸುತ್ತಿದ್ದೇವೆ, ಪ್ರತಿವರ್ಷ ಸರ್ವ ಸದಸ್ಯರ ಸಭೆ ನಡೆಸಿ ಸಮಾಜದ ನೊಂದಣಿ ನವೀಕರಣ ಮಾಡಾಬೇಕಾಗಿತ್ತು ಆದರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಇದನ್ನು ಸರಿಪಡಿಸಿಕೊಂಡೇ ಚುನಾವಣೆಗೆ ದಿನ ನಿಗದಿ ಪಡಿಸಲಾಗಿದೆ, ಚುನಾವಣೆಗೆ ನ್ಯಾಯಾಲಯದಿಂದ ತಡೆ ತಂದರೆ ಎದುರಿಸಲು ಸಿದ್ದರಾಗಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಮಾಜದ ಸದಸ್ಯತ್ವ ಹೊಂದಿರದಿದ್ದ ವಸುಂಧರರೆಡ್ಡಿ ಸಮಾಜದ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇದು ಅಕ್ರಮ ಎಂದು ಯಾರಿಗೂ ಕಾಣಿಸಲಿಲ್ಲ. ಈಗ ನಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ೮೦ ಸಾವಿರ ಟಿಡಿಎಸ್ ಎಂದು ಬ್ಯಾಂಕ್ ನವರು ಸಮಾಜದ ಖಾತೆಯಿಂದ ಆದಾಯ ತೆರಿಗೆ ಇಲಾಖೆಗೆ ಜಮಾ ಮಾಡಿದ್ದಾರೆ, ಈ ಹಣವನ್ನು ಸಮಾಜಕ್ಕೆ ಪಡೆಯಲು ಸೂಕ್ತ ಲೆಕ್ಕಪತ್ರ ಆದಾಯ ತೆರಿಗೆ ಇಲಾಕೆಗೆ ಸಲ್ಲಿಸಲಾಗುವುದು ಎಂದು ಕಾರ್ಯದರ್ಶಿ ಎಂ.ಕೆ.ವತ್ಸಲ ಹೇಳಿದರು. ಸಮಾಜದ ನಿರ್ದೇಶಕಿ ಪ್ರಮೀಳಾ ಮಹದೇವ್, ಗೌರಮ್ಮ, ಮಹಾಲಕ್ಷ್ಮಿ, ನಿರ್ಮಲಾ, ಕವಿತಾ ಹಾಜರಿದ್ದರು.
Comments