ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಸಿಡಿದ ದೇವೇಗೌಡರು

ಸಿಎಂ ಸಿದ್ದರಾಮಯ್ಯ ದೊಡ್ಡ ಅಹಂಕಾರಿ ಡಿಸಿಎಂ ಆಗುವವರೆಗೆ ಅವರನ್ನು ಬೆಳೆಸಿದ್ದು ಯಾರು? ,ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಸಿಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ್ರು. ಸಿದ್ದರಾಮಯ್ಯ ಹೆಗಡೆಯವರಿಗಿಂತ ದೊಡ್ಡ ನಾಯಕನಲ್ಲ . ಎರಡು ಭಾರಿ ಸಿಎಂ ಹುದ್ದೆ ನಾನು ತಪ್ಪಿಸಿಲ್ಲ. ಕೊಪ್ಪಳದಲ್ಲಿ ಮಾಗಿ ಪ್ರಧಾನಿ ಎಚ್ ಡಿ ದೇವೇಗೌಡರು ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಧಿಕಾರ ಹಾಗೂ ಹಣ ಇರುವುದರಿಂದ ಅಹಂಕಾರ ಬಂದಿದೆ, ಆದರೆ ರಾಮಕೃಷ್ಣ ಹೆಗಡೆಗಿಂತ ಸಿದ್ದರಾಮಯ್ಯ ದೊಡ್ಡ ಮುಖಂಡರಲ್ಲ. ಜೆಡಿಎಸ್ ನಲ್ಲೇ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಮಾಜಿ ಪ್ರಧಾನಿಎಚ್ ಡಿ ದೇವೇಗೌಡ, ಸಿದ್ದರಾಮಯ್ಯ ಹೆಗಡೆಗಿಂತ ದೊಡ್ಡ ಲೀಡರ್ ಅಲ್ಲ, ಎಲ್ಲಿದ್ರು ಇವರು.... ಉಪ ಮಖ್ಯಮಂತ್ರಿಯವರಿಗೆ ಬೆಳಸಿದ್ದು ಯಾರು? ಇವರಿಗೆ ಒಂದು ಕಾಲದಲ್ಲಿ ರಿಯಲೈಜೆಶನ್ ಆಗುತ್ತೆ, ದೇವೆಗೌಡನಿಗೆ ಜನರೆ ಶಕ್ತಿ, ಆದರೆ ಸಿದ್ದರಾಮಯ್ಯನಿಗೆ ದುಡ್ಡ ಇದೆ, ಅಹಂಕಾರ ಇದೆ ಮಾತನಾಡಲಿ ಎಂದು ಹೇಳಿದ್ದಾರೆ.
ಕಾರ್ಯಕರ್ತರಲ್ಲಿ ಐಕ್ಯತೆ ಮೂಡಿಸಲು ನಾನು ಕೊಪ್ಪಳಕ್ಕೆ ಬಂದಿದ್ದೇನೆ ಎಂದು ಹೇಳಿರುವ ದೇವೇಗೌಡ, ಕೊಪ್ಪಳ ಜಿಲ್ಲೆಯಲ್ಲಿ ಜೆ.ಡಿ.ಎಸ್.ಅಷ್ಟೊಂದು ಶಕ್ತಿಯುತವಾಗಿ ಬೆಳದಿಲ್ಲ, ಮುಂದಿನ ತಿಂಗಳು ಮೊದಲ ವಾರದಲ್ಲಿ ನಾನು ಮತ್ತೆ ಕೊಪ್ಪಳಕ್ಕೆ ಬರ್ತಿನಿ. ರಾಜ್ಯದಲ್ಲಿ ಕುಮಾರಸ್ವಾಮಿಗೆ ಅವಕಾಶ ಕೊಡಬೇಕೆ ಅನ್ನೋದು ಜನರ ಭಾವನೆ ಇದೆ. ಅದಕ್ಕೆ ಕಾರಣ ಅವರ ಆಡಳಿತ ಅವಧಿ ಇದನ್ನು ಮತ್ತೆ ನಾವು ತರುತ್ತೇವೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ದೇವೆಗೌಡ ನುಡಿದಿದ್ದಾರೆ.
Comments