ಇದನ್ನ ಓದ್ಬೇಡಿ ಎಂದು ಉಪ್ಪಿ ಯಾಕೆ ಹೇಳ್ತಿದಾರೆ ಗೊತ್ತಾ ..!!
ಉಪೇಂದ್ರ ಅಂದಾಕ್ಷಣ ಅಭಿಮಾನಿಗಳ ಮನದಲ್ಲಿ ಕ್ರಿಯಾಶೀಲ ವ್ಯಕ್ತಿ ತನ್ನನ್ನು ತಾನು ಸುಮ್ಮನಿರಲು ಬಿಡುವುದಿಲ್ಲ ಎಂಬುದಕ್ಕೆ ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪ್ಪೇಂದ್ರ ಅವರು ಸಾಕ್ಷಿ ಅಂತಾನೆ ಹೇಳ್ತಾರೆ. ಸಿನಿಮಾ ನಿರ್ದೇಶಕರಾಗಿ ಸ್ಕ್ರಿಪ್ಟ್ ರೈಟರ್ ಆಗಿ, ನಟರಾಗಿದ್ದ ಉಪ್ಪಿ, ರಾಜಕಾರಣಕ್ಕೂ ಪ್ರವೇಶ ನೀಡಿದ್ದರು ಅಷ್ಟಕ್ಕೆ ಸುಮ್ಮನಾಗದ ಉಪ್ಪಿ ಇದೀಗ ಲೇಖಕರೂ ಆಗಿದ್ದಾರೆ.
ಏನಪ್ಪಾ ಇದು ಅಂತೀರಾ ಹೌದು , ತಮ್ಮ ಜೀವನದ ಹಲವು ಸಂಗತಿಗಳನ್ನ ಸೇರಿಸಿ ಸೂಪರ್ ಸ್ಟಾರ್ ಉಪ್ಪಿ ಒಂದು ಪುಸ್ತಕ ಬರೆದಿದ್ದಾರೆ.ಆ ಪುಸ್ತಕದ ಹೆಸರು ಸಹ ಡಿಫರೆಂಟ್ ಆಗಿ ಇದೆ. ಇದನ್ನ ಓದ್ಬೇಡಿ ಎಂಬ ಶಿರ್ಷಿಕೆ ಇಟ್ಟಿರುವ ಉಪ್ಪಿ, ಅಲ್ಲಿಯೂ ತಾವು ಡಿಫರೆಂಟ್ ಅನ್ನೋದನ್ನ ನಿರೂಪಿಸಿದ್ದಾರೆ.
Comments