ಬಿಜೆಪಿಗೆ ಪವರ್ ಶಾಕ್ ನೀಡಲು ಡಿ ಕೆ ಶಿವಕುಮಾರ್ ಸಜ್ಜು

ವಿದ್ಯುತ್ ಖರೀದಿಯಲ್ಲಿ ಭಾರಿ ಅವ್ಯವಹಾರದ ನಡೆದಿದೆ. ಶೋಭಾ ಕರಂದ್ಲಾಜೆ ಅವರು ಸಚಿವೆ ಆಗಿದ್ದಾಗ ಅವ್ಯವಹಾರ ನಡೆದಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ವರದಿಯಲ್ಲಿ 28 ಸಾವಿರ ಕೋಟಿ ರೂ.ಗಳು ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ದಾಖಲೆ ಸಮೇತ ಉಲ್ಲೇಖ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಜಿಂದಾಲ್ ಸಂಸ್ಥೆಯಿಂದ ಪ್ರತಿ ಯುನಿಟ್ ಗೆ 3.50 ರುಪಾಯಿ ನೀಡಲು ಒಪ್ಪಿಗೆ ಆಗಿತ್ತು. ಆದರೆ ಜಿಂದಾಲ್ ನಿಂದ 6.20 ರುಪಾಯಿ ಗೆ ಪ್ರತಿ ಯುನಿಟ್ ವಿದ್ಯುತ್ ಖರೀದಿ ಮಾಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಿದ್ದು, ಖಾಸಗಿ ಕಂಪನಿಗೆ ಅನುಕೂಲ ಮಾಡಿಕೊಡಲು ಸರ್ಕಾರದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗಿದೆ ಎನ್ನುವುದನ್ನು ದಾಖಲೆ ಸಮೇತ ಉಲ್ಲೇಖಿಸಲಾಗಿದೆ ಎನ್ನಲಾಗ್ತಿದೆ. 2014 ರಲ್ಲಿ ರಚಿಸಿದ್ದ ಸದನ ಸಮಿತಿಯಲ್ಲಿ ಒಟ್ಟು 8 ಸದಸ್ಯರಿದ್ದರು.
ಬಿಜೆಪಿಯ ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಪಕ್ಷೇತರ ಶಾಸಕ ಪಿ. ರಾಜೀವ, ಜೆಡಿಎಸ್‌ನ ಹೆಚ್.ಡಿ. ಕುಮರಾಸ್ವಾಮಿ, ಜಿ ಟಿ ದೇವೆಗೌಡ, ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ, ಶಿವಾನಂದ ಪಾಟೀಲ, ಪಿ.ಎಂ. ನರೇಂದ್ರಸ್ವಾಮಿ ಇದ್ದರು. ಸ್ಪೀಕರ್‌ಗೆ ಸದನ ಸಮಿತಿ ವರದಿ ಸಲ್ಲಿಕೆಯಾಗಿದ್ದು ಇಂದು ವಿಧಾನಸಭೆಯಲ್ಲಿ ವರದಿ ಮಂಡನೆ ಆಗುವ ಸಾಧ್ಯತೆ ಇದೆ. ಸದನ ಸಮಿತಿ ಅಧ್ಯಕ್ಷರೂ ಆದ ಇಂಧನ ಸಚಿವ ಡಿ.ಕೆ ಶಿವಕುಮಾರ್ ವರದಿ ಮಂಡನೆ ಮಾಡಲಿದ್ದಾರೆ.
Comments