ರಾಜ್ಯೋತ್ಸ್ವದ ಅಂಗವಾಗಿ ಜಿಲ್ಲಾಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ
ನಗರದ ಖಾಸ್ ಬಾಗ್ ಸದಾಶಿವನಗರದಲ್ಲಿ "ಶ್ರೀ ಮಾರುತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 62 ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರಥಮ ವರ್ಷದ ಬೆಂ.ಗ್ರಾ.ಜಿಲ್ಲಾ ಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದ ಸಮರೋಪ ಸಮಾರಂಭಕ್ಕೆ ಹಾಜರಾದ ಜನಪ್ರಿಯ ಮಾಜಿ ಶಾಸಕರಾದ ಶ್ರೀಯುತ ಜೆ ನರಸಿಂಹಸ್ವಾಮಿಯವರು ತಾಯಿ ಭುವನೇಶ್ವರಿ ಪೂಜೆ ಸಲ್ಲಿಸಿ, ಉಭಯ ಕಬಡ್ಡಿ ತಂಡಗಳ ನಾಯಕರಿಂದ ತಂಡದ ಪರಿಚಯ ಪಡೆದುಕೊಂಡು ಶುಭ ಹಾರೈಸಿ ಮಾತನಾಡುತ್ತಾ ಕಬಡ್ಡಿ ಕ್ರೀಡೆಯು ಶಕ್ತಿಯುತ ಕ್ರೀಡೆಯಾಗಿದ್ದು .ಸದೃಢ ದೇಹ ಸಂಪತ್ತನ್ನು ಕ್ರೀಡಾ ಪಟುಗಳು ಹೊಂದಬೇಕಾದರೆ ಉತ್ತಮ ಆಹಾರ ಸೇವಿಸುವುದರ ಮೂಲಕ, ಉತ್ತಮ ಆರೋಗ್ಯವನ್ನು ಹೊಂದಬೇಕು ಹಾಗೂ ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಆದುದರಿಂದ ಕ್ರೀಡಾಪಟುವು ಕ್ರೀಡಾ ಸ್ಫೂರ್ತಿಯಿಂದಿರಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಕೆ.ಬಿ. ಮುದ್ದಪ್ಪನವರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪ ಶಿವಶಂಕರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಟಿ.ವಿ. ಲಕ್ಷ್ಮೀನಾರಾಯಣ್, ನಗರ ಸಭಾ ಸದಸ್ಯರಾದ ಕೆ. ಎಚ್. ವೆಂಕಟರಾಜು ಹಾಗೂ ಎಚ್. ಎಸ್. ಶಿವಶಂಕರ್ ರವರು ಎನ್. ಕೆ. ರಮೇಶ್ ಬಿಜೆಪಿ ಮಹಿಳಾ ಮೂರ್ಚಾ ಮಾಜಿ ಅಧ್ಯಕ್ಷರಾದ ಲೀಲಾಮಹೇಶ್ ರವರು ನಗರ ಯುವಮೋರ್ಚಾ ಅಧ್ಯಕ್ಷರಾದ ಬಂತಿ ವೆಂಕಟೇಶ್ ರವರು ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾದ ಶಿವು ರವರು, ನಗರ ಕಾರ್ಯದರ್ಶಿ ಕೃಷ್ಣಮೂರ್ತಿ, ಯುವ ಮುಖಂಡರಾದ ಪ್ರಶಾಂತ್ ಹಾಗೂ ಮಾರುತಿ ಸ್ಪೋರ್ಟ್ಸ್ ಕ್ಲಬ್ ನ ಸರ್ವಸದಸ್ಯರು ಕ್ರೀಡಾಭಿಮಾನಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
Comments