ಚುನಾವಣೆಗೆ ಸಜ್ಜಾದ ಮಹಿಳಾ ಸಮಾಜ

20 Nov 2017 10:28 PM |
497 Report

ದೊಡ್ಡಬಳ್ಳಾಪುರದಲ್ಲಿರುವ ಮಹಿಳಾ ಸಮಾಜವು ಮತ್ತೊಂಮ್ಮೆ ಚುನಾವಣೆಗೆ ರೆಡಿಯಾಗಿದೆ. ಡಿಸೆಂಬರ್ ತಿಂಗಳ ೩ನೇ ತಾರೀಖಿನಂದು ವಾರ್ಷಿಕ ಸರ್ವ ಸದಸ್ಯರ ಸಭೆ ಮತ್ತು ಚುನಾವಣೆ ನಡೆಯಲಿದೆ.

ದಿನಾಂಕ ೩-೧೨-೨೦೧೭ರ ಭಾನುವಾರದಂದು ಮದ್ಯಾನ್ಹ ೩ ಘಂಟೆಯಿಂದ ೨೦೧೨-೧೩ ರಿಂದ ೨೦೧೬-೧೭ರ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ ಮಹಿಳಾ ಸಮಾಜದ ಸಭಾಂಗಣದಲ್ಲಿ ಅಧ್ಯಕ್ಷರಾದಂತಹ ಶ್ರೀಮತಿ ಎಲ್.ಸಿ. ದೇವಕಿರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿರುತ್ತದೆ.

 ಚುನಾವಣೆ ವೇಳಾ ಪಟ್ಟಿ

ಅರ್ಹ ಸದಸ್ಯರು ಉಮೇದುವಾರಿಕೆ ಅರ್ಜಿಗಳನ್ನು ಸಲ್ಲಿಸುವ ದಿನಾಂಕ ೨೪-೧೧-೨೦೧೭ನೇ ಶುಕ್ರವಾರದಿಂದ ೨೬-೧೧-೨೦೧೭ನೇ ಭಾನುವಾರದವರೆಗೆ, ಪ್ರತಿದಿನ ಬೆಳಿಗ್ಗೆ ೧೧ ಘಂಟೆಯಿಂದ ಮದ್ಯಾನ್ಹ ೩ ಘಂಟೆಯವರೆಗೆ.  ನಾಮಪತ್ರ ಪರಿಶೀಲನೆ ಮತ್ತು  ಅರ್ಹ ನಾಮ ಪತ್ರಗಳ ಪ್ರಕಟಣೆ ೨೭-೧೧-೨೦೧೭ನೇ ಸೋಮವಾರ ಮಹಿಳಾ ಸಮಾಜದ ಕಛೇರಿಯಲ್ಲಿ ಚುನಾವಣಾಧಿಕಾರಿಯವರಿಂದ.  ನಾಮ ಪತ್ರ ವಾಪಾಸ್ ಪಡೆಯಲು ಕೊನೆಯ ದಿನಾಂಕ ೨೮-೧೧-೨೦೧೭ನೇ ಮಂಗಳವಾರ ಮದ್ಯಾನ್ಹ ೩-೩೦ರ ವರೆಗೆ.  ಅರ್ಹ ಅಭ್ಯರ್ಥಿಗಳ ಪ್ರಕಟಣೆ ೨೮ರ ಮದ್ಯಾನ್ಹ ೩-೩೦ರ ನಂತರ.   ಅಗತ್ಯವಾದಲ್ಲಿ ಚುನಾವಣೆ ನಡೆಯುವ ದಿನಾಂಕ ಡಿಸೆಂಬರ್ ೩ರ ಭಾನುವಾರ ಬೆಳಿಗ್ಗೆ ೧೦ಘಂಟೆಯಿಂದ ಮದ್ಯಾನ್ಹ ೩ರ ವರೆಗೆ. ನಂತರ ಮತಗಳ ಎಣಿಕೆ ಮತ್ತು ಚುನಾವಣಾ ಪಲಿತಾಂಶ ಪ್ರಕಟಣೆ. 

Edited By

Ramesh

Reported By

Ramesh

Comments