ಕೀಟಲೆ ಮಾಡಿದವನಿಗೆ ತಕ್ಕ ಶಾಸ್ತಿ ಮಾಡಿದ ಡಿಕೆ ಶಿವಕುಮಾರ್
ಡಿ.ಕೆ. ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಯುವಕನೊಬ್ಬ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಸಚಿವರ ಹಿಂಭಾಗದಲ್ಲಿ ಆತ ಕೀಟಲೆ ಮಾಡುತ್ತಾ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ಮೊದಲೇ ಗರಂ ಆಗಿದ್ದ ಸಚಿವರು ಇದನ್ನು ಗಮನಿಸಿ ಆತನ ಕೈಗೆ ಹೊಡೆದಿದ್ದಾರೆ.
ಇದರಿಂದ ಯುವಕನ ಮೊಬೈಲ್ ಕೆಳಗೆ ಬಿದ್ದಿದೆ. ಕೀಟಲೆ ಮಾಡಿದ ಯುವಕನನ್ನು ಅಲ್ಲಿಂದ ಕಳಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲಿದ್ದವರು ಯುವಕನನ್ನು ಸ್ಥಳದಿಂದ ಕಳಿಸಿದ್ದಾರೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮೂಡ್ ಇಂದು ಸರಿ ಇದ್ದಂತಿಲ್ಲ. ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಯುವಕನ ಕೈಗೆ ಹೊಡೆದಿದ್ದಾರೆ. ಬೆಳಗಾವಿಯ ಕಾಲೇಜ್ ಒಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಕಾರ್ಯಕ್ರಮ ಮುಗಿಸಿ ಹೊರ ಬರುವಾಗ ಮಾಧ್ಯಮ ಪ್ರತಿನಿಧಿಗಳು ಎದುರಾಗಿದ್ದಾರೆ.
Comments