ದೀಪಿಕಾಗೆ ಬೆಂಬಲ ಸೂಚಿಸಿ ಸರಣಿ ಟ್ವೀಟ್ ಮಾಡಿದ ಡಿಕೆ ಶಿವಕುಮಾರ್
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದಲ್ಲಿ ರಾಣಿ ಪಾತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಮತ್ತು ಮತ್ತು ನಿರ್ದೇಶಕ ಅವರ ಶಿರಚ್ಛೇದ ಮಾಡಿದವರಿಗೆ 10 ಕೋಟಿ ಬಹುಮಾನ ನೀಡುವುದಾಗಿ ಹರಿಯಾಣದ ಆಡಳಿತಾರೂಢ ಬಿಜೆಪಿ ಮುಖಂಡ, ಮುಖ್ಯ ಮಾಧ್ಯಮ ಸಂಚಾಲಕ ಸೂರಜ್ ಪಾಲ್ ಅಮು ಘೋಷಿಸಿದ್ದಾರೆ.
ಬಜೆಪಿ ನಾಯಕರ ಈ ಘೋಷಣೆಯನ್ನು ಖಂಡಿಸಿದ ರಾಜ್ಯ ಇಂಧನ ಸಚಿವ ಡಿಕೆ ಶಿವಕುಮಾರ್ ಇದೇನಾ ಬಿಜೆಪಿ ಸಂಸ್ಕೃತಿ? ಮಹಿಳೆಯರಿಗೆ ತೋರಿಸುವ ಗೌರವ ಇದೇನಾ? ಬಿಜೆಪಿ ಮುಖಂಡನ ವಿರುದ್ಧ ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ. ದೀಪಿಕಾಗೆ ಬೆಂಬಲ ಸೂಚಿಸಿ ಸರಣಿ ಟ್ವೀಟ್ ಮಾಡಿದ ಡಿಕೆಶಿ, ಸಿನಿಮಾ ಬಗ್ಗೆ ಆಕ್ಷೇಪವಿದ್ದರೆ ಸಿಬಿಎಫ್‍ಸಿ ಮೊರೆ ಹೋಗಬೇಕು. ಅದು ಬಿಟ್ಟು ಕಲಾವಿದರಿಗೆ ಬೆದರಿಕೆ ಹಾಕುವುದು ಯಾಕೆ? ಇಂಥಾ ಬೆದರಿಕೆಗಳು ಅದರಲ್ಲೂ ವಿಶೇಷವಾಗಿ ಮಹಿಳೆಗೆ ಬೆದರಿಕೆ ನೀಡುತ್ತಿರುವುದು ದೇಶದಲ್ಲಿ ಅಸಹಿಷ್ಣುತೆ ಮತ್ತು ಮತಾಂಧತೆ ಹೆಚ್ಚುತ್ತಿರುವುದರ ಸಂಕೇತ.
Comments