ನವೋದಯ ತರಬೇತಿ ಶಿಭಿರ ಪ್ರಾರಂಭ....
ದೊಡ್ಡಬಳ್ಳಾಪುರ ನಗರದಲ್ಲಿರುವ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ವತಿಯಿಂದ ೨೦೧೮ನೇ ಸಾಲಿಗೆ ನವೋದಯ ಕೋಚಿಂಗ್ ಕ್ಲಾಸ್ ದಿನಾಂಕ ೧-೧೧-೧೭ರಿಂದ ಪ್ರಾರಂಭವಾಯಿತು. ಗ್ರಾಮಾಂತರ ಶಾಲಾ ಮಕ್ಕಳಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಳೆದ ಆರು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಈ ತರಬೇತಿಯು ಕಡಿಮೆ ಅವದಿಯಲ್ಲಿ ತಾಲ್ಲೂಕಿನಲ್ಲೇ ಅತ್ಯಂತ ಜನಪ್ರಿಯವಾಗಿದೆ. ಹದಿನೈದು ಮಕ್ಕಳಿಂದ ಆರಂಭವಾದ ತರಬೇತಿಯು ಗುಣಮಟ್ಟದ ಶಿಕ್ಷಣ ನೀಡುವ ಆದ್ಯತೆಯಿಂದ ೭೦ ಮಕ್ಕಳಿಗೆ ಸೀಮಿತಗೊಳಿಸಲಾಗಿದೆ. ಅನುಭವೀ ಶಿಕ್ಷಕರಿಂದ ನೀಡುತ್ತಿರುವ ಈ ತರಬೇತಿಗೆ ಪೋಷಕರು ಹಾಗೂ ವಿವಿದ ಶಾಲಾ ಶಿಕ್ಷಕರು ತಾವಾಗಿಯೇ ಮಕ್ಕಳನ್ನು ಕರೆತರುತ್ತಿದ್ದಾರೆ. ಟ್ರಸ್ಟ್ ಕಾರ್ಯದರ್ಶಿ ರಮೇಶ್ ರವರ ನೇತೃತ್ವದಲ್ಲಿ ನಡೆಯುತ್ತಿರುವ ಈ ತರಬೇತಿಗೆ ಟ್ರಸ್ಟಿಗಳಾದ ಕೃಷ್ಣಮೂರ್ತಿ ಮತ್ತು ಸುಧಾಕರ್ ಇವರು ಸಹಕಾರ ನೀಡುತ್ತಿದ್ದಾರೆ.
Comments