ಗಿರಿಜಾ ರಾಮಲಿಂಗ ರಥೋತ್ಸವ...ಶ್ರೀ ರಾಮಲಿಂಗ ಚಂದ್ರಚೌಡೇಶ್ವರಿ ದೇವಸ್ಥಾನ




ದೇವಾಂಗ ಮಂಡಲಿ ಹಾಗೂ ತಿಪ್ಪೂರು ಪದ್ಮಾ ಗೋಪಾಲಕೃಷ್ಣ ಕುಟುಂಬದವರಿಂದ ಶ್ರೀ ರಾಮಲಿಂಗ ಚಂದ್ರಚೌಡೇಶ್ವರಿ ದೇವಸ್ಥಾನದಲ್ಲಿ ಗಿರಿಜಾ ರಾಮಲಿಂಗಸ್ವಾಮಿ ಕಲ್ಯಾಣ ಮಹೋತ್ಸವ ಮತ್ತು ಬ್ರಹ್ಮ ರಥೋತ್ಸವ ಅದ್ದೂರಿಯಿಂದ ನೆರವೇರಿತು. ಶ್ರೀ ರಾಮಲಿಂಗಸ್ವಾಮಿ, ಶ್ರೀ ಪಾರ್ವತೀದೇವಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿ ಹಾಗೂ ದೇವಲ ಮಹರ್ಷಿಗೆ ವಿವಿದ ಪೂಜೆ ನಡೆಯಿತು. ಬೆಳಿಗ್ಗೆ ೧೦-೩೦ಕ್ಕೆ ಕಲ್ಯಾಣಮಹೋತ್ಸವ ೧.೩೦ಕ್ಕೆ ಬ್ರಹ್ಮ ರಥೋತ್ಸವ ಸಂಜೆ ಉಯ್ಯಾಲೋತ್ಸವ ಪೂಜೆ ನಡೆಯಿತು. ರಥ ಸಾಗುವ ಮಾರ್ಗದಲ್ಲಿ ಭಕ್ತರು ಬಾಳೆಹಣ್ಣು ಧವನ ಅರ್ಪಿಸಿ ಜಯಘೋಷ ಹಾಕಿದರು.
Comments