೧೫೪ನೇ ದ್ವೈಮಾಸಿಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ



ದೊಡ್ಡಬಳ್ಳಾಪುರ ನಗರದಲ್ಲಿರುವ ಸುಸ್ವರ ಟ್ರಸ್ಟ್ ಇವರ ವತಿಯಿಂದ ಆಯೋಜಿಸಲ್ಪಟ್ಟಿದ್ದ ಶಾಸ್ತ್ರೀಯ ಗಾಯನದಲ್ಲಿ ಶ್ರೀ ಪುರಂದರ ದಾಸರ ದೇವರನಾಮಗಳ ಸಂಗೀತ ಕಛೇರಿ ಕಾರ್ಯಕ್ರಮವು ಕಾವೇರಿ ಕಲ್ಯಾಣ ಮಂಟಪದಲ್ಲಿ ಯಶಸ್ವಿಯಾಗಿ ನಡೆಯಿತು. ವಿದ್ವಾನ್ ಶ್ರೀ ವಿದ್ಯಾಭೂಷಣ ತೀರ್ಥರ ಹಾಡುಗಾರಿಕೆ, ವಿದ್ವಾನ್ ಶ್ರೀ ಶ್ರೀಧರ್ ರವರ ಪಿಟೀಲು, ವಿದ್ವಾನ್ ಶ್ರೀ ಸಾಯಿನಾಥ್ ರವರಿಂದ ದಂಗ ಮತ್ತು ಶ್ರೀ ವಿದ್ವಾನ್ ಚಂದ್ರಶೇಖರ್ ಘಟಂ ವಾದ್ಯದೊಂದಿಗೆ ಕೂಡಿತ್ತು. ಕಾರ್ಯಕ್ರಮವನ್ನು ಖಾಸ್ ಬಾಗ್ ನಾಗರಾಜ್ ರವರ ಸ್ಮರಣಾರ್ಥ ಶ್ರೀ ಆರೂಡಿ ಪ್ರಕಾಶ್ ಮತ್ತು ಶ್ರೀಮತಿ ತನುಜ ರವರು ಪ್ರಾಯೋಜಿಸಿದ್ದರು. ಕಾರ್ಯಕ್ರಮದ ಸ್ಥಳ ಪ್ರಾಯೋಜಕರು ಶ್ರೀಮತಿ ಎಂ. ಭ್ರಮರಾಂಬ ಮತ್ತು ಶ್ರೀ ಬಿ. ಶಿವನಂಜಪ್ಪ ಹಾಗೂ ಕುಟುಂಬದವರು.
Comments