ಐಹೊಳೆ ಶಾಸಕ ಡಿ.ಮಹಾಲಿಂಗಪ್ಪರ ವಿರುದ್ಧ ಗುಡುಗಿದ ಡಿಕೆ ಶಿವಕುಮಾರ್

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿಧಾನಸಭೆಗೆ ಇಂದು ತಿಳಿಸಿದರು. ಪ್ರಶ್ನೋತ್ತರ ವೇಳೆ ಶಾಸಕ ಐಹೊಳೆ ಡಿ.ಮಹಾಲಿಂಗಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಲ್ಲಿದ್ದಲು ಸಮಸ್ಯೆ ಇದ್ದರೂ ವಿದ್ಯುತ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೃಷಿ ಪಂಪ್‍ಸೆಟ್‍ಗಳಿಗೆ 7 ಗಂಟೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕಾಗಿ 9400 ಕೋಟಿ ರೂ. ಸರ್ಕಾರ ಭರಿಸುತ್ತಿದೆ. ಸತತ ಮೂರು ವರ್ಷಗಳ ಕಾಲ ಬರ ಪರಿಸ್ಥಿತಿ ಇದ್ದರೂ ರೈತರಿಗೆ ವಿದ್ಯುತ್ ನೀಡಲಾಗಿದೆ. ಹಗಲಿನಲ್ಲೇ 7 ಗಂಟೆ ವಿದ್ಯುತ್ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ 440 ಕೆವಿ ವಿದ್ಯುತ್ ಉಪಕೆಂದ್ರ ಸ್ಥಾಪಿಸಲಿದ್ದು, ಇದು ಬೆಳಗಾವಿ ಜಿಲ್ಲೆಯಲ್ಲೇ ಅತಿ ದೊಡ್ಡ ಉಪಕೇಂದ್ರವಾಗಲಿದೆ ಎಂದರು. ಮೊರಬ ಮತ್ತು ಮುಗಳಕೋಡ ಗ್ರಾಮಗಳಲ್ಲಿ 270 ಕೆ.ವಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ಉದ್ಘಾಟನೆಗೆ ಸಿದ್ದ: 1050 ಮೆಗಾ ವ್ಯಾಟ್ ಸಾಮಥ್ರ್ಯದ ಸೌರ ವಿದ್ಯುತ್ ಘಟಕಗಳ ಉದ್ಘಾಟನೆಗೆ ಸಿದ್ದವಾಗಿದ್ದು , ಎಲ್ಲ ಶಾಸಕರಿಗೂ ಪತ್ರ ಬರೆದು ಉದ್ಘಾಟನೆಗೆ ಸಿದ್ದತೆ ಮಾಡಿಕೊಳ್ಳಲು ಕೋರಲಾಗುವುದು ಎಂದು ಬಿ.ಆರ್.ಯಾವಗಲ್ ಅವರ ಪ್ರಶ್ನೆಗೆ ಉತ್ತರಿಸಿದರು.
1200 ಮೆಗಾ ವ್ಯಾಟ್ ಸಾಮಥ್ರ್ಯದ ಸೌರ ವಿದ್ಯುತ್ ಘಟಕವನ್ನು ಸ್ಥಾಪಿಸಲಾಗುತ್ತಿದ್ದು, 103 ತಾಲ್ಲೂಕುಗಳ ಪೈಕಿ 60 ತಾಲ್ಲೂಕುಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನು ಹೊಸದಾಗಿ 43 ತಾಲ್ಲೂಕುಗಳ ಸೌರ ವಿದ್ಯುತ್ ಘಟನೆ ಸ್ಥಾಪಿಸಲಾಗುವುದು. ಪ್ರತಿ ಯೂನಿಟ್ ವಿದ್ಯುತ್‍ಗೆ ಕೆಇಆರ್‍ಸಿ 5.48 ಪೈಸೆ ನಿಗದಪಡಿಸಿದ್ದು, ಸರ್ಕಾರ ಖರೀದಿಸಲಿದೆ. ಸೌರ ವಿದ್ಯುತ್ ಉದ್ಘಾಟನೆ ಮಾಡಲು ಖಾಸಗಿ ಅವರು ಮುಂದೆ ಬಂದರೆ ಸರ್ಕಾರ ಎಲ್ಲ ವ್ಯವಸ್ಥೆ ಮಾಡಿಕೊಡಲಿದೆ ಎಂದರು.
Comments