ಗಾನಶ್ರೀ ಸಾಧನೆ ಗುರುತಿಸದ ಅಧಿಕಾರಿಗಳು...
ಛತ್ತೀಸ್ ಘಡದಲ್ಲಿ ನಡೆದ ೬೩ನೇ ರಾಷ್ಟ್ರೀಯ ಯೋಗ ಛಾಂಪಿಯನ್ ಷಿಪ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಚಿನ್ನದ ಪಧಕ ಪಡೆದ ಎ.ಗಾನಶ್ರೀ ಸಾಧನೆಯನ್ನು ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಕಡೆಗಣಿಸಿದ್ದಾರೆಂದು ತಂದೆ ಅಶ್ವತ್ಥರವರು ಬೇಸರ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದರೂ ತಾಲ್ಲೂಕು ಆಡಳಿತ ಮತ್ತು ನಗರಸಭೆಯವರು ಗಮನ ಹರಿಸುತ್ತಿಲ್ಲ, ಕ್ರೀಡಾ ಇಲಾಖೆಯಿಂದ ಯಾವುದೇ ಸವಲತ್ತು ಸಿಕ್ಕಿಲ್ಲ, ಕ್ರೀಡಾಪಟು ಮಾಡಲು ವೆಚ್ಚಮಾಡಿದ ಹಣ ಉಳಿಸಿದ್ದರೆ ಆಕೆಯ ಮುಂದಿನ ಭವಿಷ್ಯಕ್ಕೆ ಉಪಯೋಗವಾಗುತ್ತಿತ್ತು ಎಂದು ಹೇಳಿದರು.
Comments