ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯದ ಬಗ್ಗೆ ದೇವೇಗೌಡರು ಪ್ರತಿಕ್ರಿಯೆ

ಚುನಾವಣೆಯ ಹೊಸ್ತಿಲಲ್ಲಿರುವಾಗ ಇದು ಬೇಕಿತ್ತಾ ..? ಅಂತ ದೇವೇಗೌಡರು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಖಾಸಗಿ ಆಸ್ಪತ್ರೆ ವಿಧೇಯಕ ಈ ಸಮಯದಲ್ಲಿ ಬೇಕಿತ್ತಾ..? ಅಂತ ಅಸಮಾಧಾನ ವ್ಯೆಕ್ತಪಡಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯದ ಬಗ್ಗೆ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ. ಖಾಸಗಿ ಆಸ್ಪತ್ರಗಳ ನಿಯಂತ್ರಣ ವಿಧೇಯಕ್ಕೆ ಎಚ್ ಡಿ ದೇವೇಗೌಡರು ಅಸಮಾಧಾನ ವ್ಯೆಕ್ತಪಡಿಸಿದ್ದಾರೆ. ತಪ್ಪು ಮಾಡಿದವರು ಲಾಯರ್ ಸಹ ಇಟ್ಟುಕೊಳ್ಳಬಾರದು ಎಂದರೆ ಹೇಗೆ ಎಂದು ಸಿಎಂಗೆ ಪ್ರಶ್ನೆ ಮಾಡಿದ್ದಾರೆ. ಎಲ್ಲವನ್ನು ಕೂಡ ಸಮತೋಲನ ಮಾಡಿಕೊಂಡು ಕಾನೂನು ಮಾಡಬೇಕು ಎಂಬ ಸಲಹೆ ನೀಡಿದ್ದಾರೆ. ಪರೋಕ್ಷವಾಗಿ ಮಸೂದೆ ಮಂಡನೆಯ ಬಗ್ಗೆ ಅಸಮಾಧಾನ ವ್ಯೆಕ್ತಪಡಿಸಿದ್ದಾರೆ. ಇದು ಮತ್ತೊಂದು ರೀತಿಯ ದೌರ್ಜನ್ಯಕ್ಕೆ ಕಾರಣವಾಗಲಿದೆ. ಈ ಕುರಿತು ಸರ್ಕಾರ ನನ್ನ ಬಳಿ ಯಾವುದೇ ಸಲಹೆಯನ್ನು ಕೇಳಿಲ್ಲ , ಆದರೆ ವೈದ್ಯರ ಸಂಗಾ ಭೇಟಿ ಮಾಡಿತ್ತು.ಈ ಬಿಲ್ ಬಗ್ಗೆ ನನ್ನ ಜೊತೆ ಚರ್ಚೆ ನಡೆಸಿತ್ತು ಎಂಬ ಮಾಹಿತಿ ನೀಡಿದರು.
Comments