ಕುಂದನಗರಿಯ ಕುಮಾರ ಪರ್ವದಲ್ಲಿ ಎಚ್ ಡಿಕೆ ಹೇಳಿದ್ದೇನು?

ಬೆಳಗಾವಿಯಲ್ಲಿ ಜೆಡಿಎಸ್ ಕುಮಾರಪರ್ವ ಸಮಾವೇಶ ನಗರದ ಸಿಪಿಎಡ್ ಮೈದಾನದಲ್ಲಿ ಬೃಹತ್ ಮೈದಾನದಲ್ಲಿ ಬೃಹತ್ ಕುಮಾರ ಪರ್ವ ಜೆಡಿಎಸ್ ಸಮಾವೇಶಕ್ಕೆ ಚಾಲನೆ ನೀಡಲಾಗಿದೆ. ಇದಕ್ಕೂ ಮುಂಚೆ ಎಚ್ ಡಿ ದೇವೇಗೌಡ,ಮಾಜಿ ಸಿಎಂ ಕುಮಾರಸ್ವಾಮಿ ಬೆಳಗಾವಿ ನಗರದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಈ ಸಮಾವೇಶದ ಮೂಲಕ ಶಾಸಕರಾದ ಎ ಎಸ ಪಾಟೀಲ್ ನಡಹಳ್ಳಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಸಮಾವೇಶದಲ್ಲಿ ಜೆಡಿಎಸ್ ನಾಯಕ ಬಸವರಾಜು ಹೊರಟ್ಟಿ ,ಎ ಎಸ್ ಪಾಟೀಲ , ಮಧುಬಂಗಾರಪ್ಪ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸಮಾವೇಶದಲ್ಲಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಬಸವರಾಜು ಹೊರಟ್ಟಿಯವರು ಒಂದು ಮಾತು ಹೇಳಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಮುಧೋಳ್ ನ ಒಂದು ಗ್ರಾಮ ವಾಸ್ತವ್ಯದಲ್ಲಿ ಈ ಭಾಗದ ದೇವದಾಸಿ ವೃತ್ತಿ ಮಾಡುವಂತಹ ತಾಯಿಯ ಹೊಟ್ಟೆಯಲ್ಲಿ ಜನಿಸಿದ ಹೆಣ್ಣು ಮಗಳು ಆ ತಾಯಿ ಮಡಿದ ಉದ್ಯೋಗ ಮಾಡಬಾರದು ಅಂತ ಕಷ್ಟ ಪಟ್ಟು ಓದಿ ಎಂ.ಎ ಪದವೀಧರಳಾಗಿ ಕೆಲಸ ದೊರಕಿರಲಿಲ್ಲ ಎಂಬ ಮಾತನ್ನು ಬಸವರಾಜು ಹೊತ್ತಿ ನೆನೆಪಿಸಿಕೊಂಡರು. ಈ ಮಾತನ್ನು ನಾನು ಏಕೆ ಮತ್ತೆ ಪುನರ್ ಉಚ್ಛಾರ ಮಾಡುತ್ತಿದ್ದೇನೆ ಅಂದರೆ ಯಾವ ಯಡಿಯೂರಪ್ಪನವರು ಕುಮಾರಸ್ವಾಮಿ ಅಧಿಕಾರವನ್ನು ಕೊಡಲಿಲ್ಲ. ನನಗೆ ಅನ್ಯ ಮಾಡಿದ್ದಾರೆ ಎಂದು ಈ ನಾಡಿನ ತಾಯಂದಿರ ಮುಂದೆ ವೇದಿಕೆಯ ಮುಖಾಂತರ ಮನವಿಯನ್ನು ಮಾಡಿಕೊಂಡು ಬಂದರು. ಇವತ್ತು ಈ ನಾಡಿನ ತಾಯಂದಿರು ನೀವು ಪ್ರತಿದಿನ ಯಾವ ದೇವರಿಗೆ ಪೂಜೆ ಮಾಡುತ್ತೀರಾ ,ಪೂಜೆಯನ್ನು ಮಾಡುವಾಗ ದೇವರ ಚಿತ್ರಕ್ಕೆ , ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಆಗಲಿಕ್ಕೆ ಆಶೀರ್ವಾದ ಮಾಡು ಅಂತ ಹೇಳಿ ಎರಡು ಹೆಚ್ಚಿನ ಹೂವನ್ನು ನನ್ನ ಪರವಾಗಿ ತಾವು ಸಮರ್ಪಣೆ ಮಾಡಿ ಎಂದು ತಾವು ವೇದಿಕೆಯ ಮೇಲೆ ಭಾಷಣ ಮಾಡಿದರು.ಅವರ ಮಾತಿಗೆ ಮರುಳಾಗಿ ಈ ನಾಡಿನ ಜನತೆ ಅವರಿಗೆ ಆಶೀರ್ವಾದ ಮಾಡಿದ್ರಿ ,ಆದರೆ 24 ಗಂಟೆಯಲ್ಲಿ ದೇವದಾಸಿ ವೃತ್ತಿ ಮಾಡುವ ಹೆಣ್ಣು ಮಗಳಿಗೆ ವಿಧಾನ ಸೌಧ ಮುಖ್ಯಮಂತ್ರಿ ಕಚೇರಿಯಲ್ಲಿ ನಾನು ಕೆಲಸ ಕೊಟ್ಟಿದ್ದೆ, ಆ ಹೆಣ್ಣು ಮಗಳನ್ನು ಆ ಕಚೇರಿಯಿಂದ ಹೊರದಬ್ಬಿದ್ದು ಈ ನಾಡಿನ ಹೆಣ್ಣು ಮಕ್ಕಳ ಬಗ್ಗೆ ಯಡಿಯೂರಪ್ಪನವರು ತೋರಿದ ಗೌರವ ಏನು ಅನ್ನುವುದನ್ನು ನೋವಿನಿಂದ ಇವತ್ತು ನಿಮಗೆ ನೆನೆಪಿಸಿಕೊಡಲು ಬಯಸುತ್ತೇನೆ.ಆ ಹೆಣ್ಣು ಮಗಳು ಎಂಎ, ಪಿಎಚ್ ಡಿ ಮಾಡಿ ಡಾಕ್ಟರೇಟ್ ಪದವಿ ಪಡೆದು ಉತ್ತಮ ಜೀವನವನ್ನು ಬೆಂಗಳೂರಿನಲ್ಲಿ ನಿರ್ವಹಣೆ ಮಾಡುತ್ತಿದ್ದಾಳೆ. ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರಿಗೂ ಇರುವ ವ್ಯೆತ್ಯಾಸವನ್ನು ಎ ವೇದಿಕೆಯ ಮೂಲಕ ತಿಳಿಸಲು ಬಯಸುತ್ತೇನೆ. ನಾನು ಹಳ್ಳಿಗಳಿಗೆ ಬಂದಾಗ ನೀವುಗಳು ಒಂದು ಮಾತು ಹೇಳುತ್ತೀರಿ ನೀನು ಯಡಿಯೂರಪ್ಪನವರಿಗೆ ಒಂದು 20 ತಿಂಗಳು ಬಿಟ್ಟುಕೊಟ್ಟಿದ್ದರೆ, ನೀನೇ ಈ ರಾಜ್ಯದಲ್ಲಿ ಇನ್ನು 10 -20 ವರ್ಷ ಮುಖ್ಯಮಂತ್ರಿಯಾಗಿರುತ್ತಿದೆ. ಅದು ಒಂದು ತಪ್ಪು ಮಾಡಬಾರದಿತ್ತು.ಎನ್ನುವ ಮಾತುಗಳನ್ನು ಹಲವಾರು ಹಳ್ಳಿಗಳ್;ಅಲ್ಲಿ ಹೇಳಿದ್ರಿ ಆದರೆ ನಿಜವಾದ ಸತ್ಯಂಶ ನಾನು ಆವತ್ತು ಹೇಳಲು ಹೊರಟರೆ ನೀವು ನಂಬುತ್ತಿರಲಿಲ್ಲ. ಯಡಿಯೂರಪ್ಪನವರಿಗೆ ಅಧಿಕಾರ ಕೊಟ್ಟೆ , ಅವರ ಅಧಿಕಾರ ತೆಗೆದಿದ್ದು ಬಿಜೆಪಿ ನಾಯಕರು ಎಂಬುದನ್ನು ಇದೇ ಯದಿರುರಪ್ಪನವರು ಕೆಜೆಪಿ ಪಕ್ಷ ಮಾಡಿದಾಗ ಭಾಷಣದಲ್ಲಿ ಹೇಳಿರುವ ಮಾತನ್ನು ಕೇಳಿದ ನಂತರ ಆಗಲಾದರೂ ಈ ಕುಮಾರಸ್ವಾಮಿ ಯಾವ ತಪ್ಪು ಮಾಡದೇ ಇದ್ದರು 10 ವರ್ಷ ಶಿಕ್ಷೆ ಕೊಟ್ಟಿದ್ದೇವೆ ಇನ್ನು ಮತ್ತೆ ಕುಮಾರಸ್ವಾಮಿಗೆ ಶಿಕ್ಷೆ ಕೊಡುವುದಿಲ್ಲ ಎನ್ನುವುದನ್ನು ತಾವು ನಿರ್ಧಾರ ಮಾಡಬೇಕು.
Comments