ಪ್ರಸಾದ ತಿಂದು ಕೈ ತೊಳೆಯಲು ಹೋಗಿ ಮೃತಪಟ್ಟ ಬಾಲಕರು

14 Nov 2017 6:30 PM |
568 Report

ದೇವಸ್ಥಾನಕ್ಕೆ ಆಗಮಿಸಿದ ಬಾಲಕರಿಬ್ಬರು ಅಲ್ಲಿ ನೀಡಿದ್ದ ಪ್ರಸಾದ ತಿಂದಿದ್ದಾರೆ. ನಂತರ ಕೈ ತೊಳೆಯಲೆಂದು ಹತ್ತಿರದ ಕುಂಟೆಗೆ ತೆರಳಿದ್ದಾರೆ. ಈ ವೇಳೆ ಬಾಲಕರಿಬ್ಬರು ಕುಂಟೆಯಲ್ಲಿ ಜಾರಿಬಿದ್ದು ಸಾವನ್ನಪ್ಪಿದ್ದಾರೆ.

ಈ ಸಮಯದಲ್ಲಿ ಅಲ್ಲೇ ಇದ್ದ ಇನ್ನೊಬ್ಬ ಬಾಲಕ ತಕ್ಷಣ ಗ್ರಾಮದಲ್ಲಿ ವಿಷಯ ತಿಳಿಸಿದ್ದಾನೆ. ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ನೀರಿನಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಪ್ರದೀಪ್ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By

Ramesh

Reported By

Ramesh

Comments