ಮಟ್ಕಾ ಕಿಂಗ್‌ಪಿನ್ ಇದೀಗ ಪೋಲೀಸರ ಕೈ ಸೆರೆ
ಚಿಂತಾಮಣಿ ಹೊರವಲಯದಲ್ಲಿ ಮಟ್ಕಾ ನಡೆಸುತ್ತಿರುವ ಬಗ್ಗೆ ಹಲವಾರು ದಿನಗಳಿಂದ ಪೊಲೀಸರಿಗೆ ದೂರು ಬಂದಿತ್ತು. ಜತೆಗೆ ಮಟ್ಕಾದಿಂದ ಹಲವಾರು ಜನರ ಬದುಕು ಹಾಳಾಗಿ ಮನೆಗಳಲ್ಲಿ ತಮ್ಮ ಅಳಲನ್ನ ತೋಡಿಕೊಂಡಿದ್ದರು.
ಈ ಹಿನ್ನಲೆ ಮಟ್ಕಾದಿಂದ ನಷ್ಟ ಹೊಂದಿದವರು ಪೊಲೀಸರಿಗೆ ಮಾಹಿತಿ ನೀಡಿದ್ರು. ಈ ಹಿನ್ನಲೆ ಕಾರ್ಯಚರಣೆ ನಡೆಸಿದ ಪೊಲೀಸರು ಮಟ್ಕಾ ಕಿಂಗ್ ಪಿನ್ ಆನಂದ್ ಎಂಬ ಮಟ್ಕಾ ಕಿಂಗ್‌ಪಿನ್‌ನನ್ನು ಬಂಧಿಸಿದ್ದಾರೆ. ಜತೆಗೆ ಬಂಧಿತರಿಂದ 3000 ರೂಪಾಯಿ ನಗದು, ಒಂದು ದ್ವಿಚಕ್ರ ವಾಹನ, ಒಂದು ಮೊಬೈಲ್ ಪೋನ್ ವಶಕ್ಕೆ ಪಡೆದಿದ್ದು, ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Comments