ನಂದಿ ದೀಪೋತ್ಸವಕ್ಕೆ ಹರಿದುಬಂದ ಸಾವಿರಾರು ಭಕ್ತ ಜನ ಸಾಗರ
ಬೆಳಗ್ಗೆಯಿಂದಲೂ ಬೋಗ ನಂದಿಶ್ವರನಿಗೆ ವಿಶೇಷವಾದ ಅಲಂಕಾರ ಮಾಡಲಾಗಿತ್ತು. ದಿನವಿಡೀ ಭಕ್ತಾದಿಗಳು ದೇವರ ದರ್ಶನ ಪಡೆದು ಪುನಿತರಾದ್ರು. ಈ ಲಕ್ಷ ದೀಪಗಳ ಅಲಂಕಾರ ಎಲ್ಲರ ಕಣ್ಮನ ಸೆಳೆಯಿತು. ಜತೆಗೆ ನಂದಿ ಗ್ರಾಮದಲ್ಲಿನ ಆಕರ್ಷಣಿಯ ವಿದ್ಯುತ್ ದೀಪಾಲಂಕಾರ ಜಗಮಗಿಸುತ್ತಿದ್ದು, ನೋಡುಗರನ್ನ ಆಕರ್ಷಿಸಿತು.
ಕಾರ್ತಿಕ ಕಡೆಯ ಸೋಮವಾರದಂದು ನಡೆಯುವ ನಂದಿ ಲಕ್ಷ ದಿಪೋತ್ಸವಕ್ಕೆ ಸಾವಿರಾರು ಜನ ಹರಿದು ಬಂದು ದೀಪವನ್ನ ಹಚ್ಚಿ ತಮ್ಮ ಇಷ್ಟಾರ್ಥ ಸಿದ್ಧಿಗೆ ಬೇಡಿಕೊಂಡರು. ಇನ್ನೂ ನಿನ್ನೆ ಸಂಜೆ ನಡೆದ ಲಕ್ಷ ದಿಪೋತ್ಸವಕ್ಕೆ ಚಿಕ್ಕಬಳ್ಳಾಪುರ ಸೇರಿದಂತೆ ಬೇರೆ ಬೇರೆ ಗ್ರಾಮಗಳಿಂದ ಭಕ್ತರು ಆಗಮಿಸಿ ದೇವಾಲಯದ ಆವರಣದಲ್ಲಿ ದೀಪಗಳನ್ನ ಹಚ್ಚಿದ್ರು.
Comments