ಸಕ್ಕರೆ ನಾಡಿನಲ್ಲಿ ಕಾಂಗ್ರೇಸ್ ನ ಮತ್ತೊಂದು ವಿಕೆಟ್ ಜೆಡಿಎಸ್ ನತ್ತ ಮುಖ

ವಿಧಾನ ಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ತಾರಾ ಸಮರ ಶುರುವಾಗುವಂತೆ ಕಾಣುತಿದೆ. ಮಂಡ್ಯ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿ ರಮ್ಯಾ ಫಿಕ್ಸ್ ಎಂದು ಕೇಳಿ ಬರುತ್ತಿದೆ. ಹೀಗಾಗಿ ಪಕ್ಷದ ಮೇಲೆ ಅಂಬರೀಷ್ ಮುನಿಸಿಕೊಂಡಿದ್ದು, ಕೈ ಬಿಟ್ಟು ಜೆಡಿಎಸ್ ಸೇರಲು ಮುಂದಾಗಿದ್ದಾರೆ ಅಂತ ಹೇಳಲಾಗುತ್ತಿದೆ. ತೆನೆ ಹೊರಲು ಸಿದ್ಧವಾಗಿದ್ದರಂತೆ ಅಂಬರೀಷ್
ಸಕ್ಕರೆ ನಾಡಿನಲ್ಲಿ ಕಳೆಕುಂದಿದ ಕಾಂಗ್ರೇಸ್ ಮಂಡ್ಯದಲ್ಲಿ ಶುರುವಾಗಲಿದೆ ಆಪರೇಷನ್ ಜೆಡಿಎಸ್.ಅಲ್ಲದೆ ಜೆಡಿಎಸ್ ಸೇರುವ ಸಂಬಂಧ ವರಿಷ್ಠರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.ಇನ್ನು ಮೂಲತಃ ಅಂಬರೀಷ್ ಜೆಡಿಎಸ್ ಪಕ್ಷದಿಂದ ರಾಜಕೀಯ ಪ್ರವೇಶ ಮಾಡಿದ್ದು ,ಬಳಿಕ ಕಾಂಗ್ರೇಡ್ ಸೇರಿದ ಮೇಲು ಸಹ ಪಕ್ಷದೊಂದಿಗೆ ಅಂಬಿ ಒಡನಾಟವನ್ನು ಬೆಳೆಸಿಕೊಂಡಿದ್ದಾರೆ. ಒಂದು ವೇಳೆ ಅಂಬಿ ಜೆಡಿಎಸ್ ಸೇರ್ಪಡೆಗೊಂಡರೆ ಎಲೆಕ್ಷನ್ ನಲ್ಲಿ ಅಂಬಿ ಹಾಗೂ ರಮ್ಯಾ ಮುಖ ಮುಖಿ ಆಗೋ ಎಲ್ಲಾ ಸಾಧ್ಯತೆಗಳು ಸಹ ಹೆಚ್ಚಿದೆ.
Comments