ಉಪ್ಪಿಯ ಪ್ರಜಾಕಿಯ ಪಕ್ಷವನ್ನು ಶ್ಲಾಘಿಸಿದ ಯದುವೀರ್ ಒಡೆಯರ್
ಕರ್ನಾಟಕ್ಕೆ ಹೊಸ ಆಲೋಚನೆಗಳು ಬೇಕಾಗಿತ್ತು. ಆ ಹೊಸ ಆಲೋಚನೆಯನ್ನು ಉಪೇಂದ್ರ ಅವರು ಮಾಡಿದ್ದಾರೆ. ಈ ರೀತಿಯ ಪಕ್ಷ ಕರ್ನಾಟಕ್ಕೆ ಬೇಕಾಗಿತ್ತು. ಉಪೇಂದ್ರ ಅವರು ಈ ಮೂಲಕ ಕರ್ನಾಟಕ್ಕೆ ಒಳ್ಳೆಯದು ಮಾಡಲಿ ಎಂದು ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಉಪೇಂದ್ರ ಅವರು ಪ್ರಜಾಕೀಯ ಪಕ್ಷ ಕಟ್ಟಿದ್ದು ಒಳ್ಳೆದಾಯಿತು ಎಂದು ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ಕೊಳ್ಳೆಗಾಲ ತಾಲೂಕಿನ ಕುರುಬರಕಟ್ಟೆ ಗ್ರಾಮದಲ್ಲಿ ಶ್ರೀ ಧರೆಗೆ ದೊಡ್ಡವರ ಸಂಸ್ಥಾನ ಮಠದ ಧ್ಯಾನ ಮಂದಿರ ಉದ್ಘಾಟಿಸಿ ಮಾತನಾಡಿದ ಅವರು, ಉಪೇಂದ್ರ ಅವರು ಹೊಸ ಆಲೋಚನೆ ಇಟ್ಟುಕೊಂಡು ಪಕ್ಷ ಸ್ಥಾಪಿಸಿದ್ದಾರೆ. ಅವರು ಇಂಡಿಪೆಂಡೆಟ್ ಆಗಿ ಪಕ್ಷಕಟ್ಟಿರುವುದು ಒಳ್ಳೆಯದು ಎಂದು ತಿಳಿಸಿದರು.ಮುಂದುವರೆದು ಮಾತನಾಡಿದ ಅವರು, ನನಗೆ ಸದ್ಯಕ್ಕೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ ಎಂದು ತಿಳಿಸಿದರು.
Comments