ವೈದ್ಯರ ಬೆಂಬಲಕ್ಕೆ ನಿಂತ ಕುಮಾರಣ್ಣ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ರಮೇಶ್‍ಕುಮಾರ್ ಅವರು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಕಡಿವಾಣ ಹಾಕುವ ವಿಧೇಯಕದ ಬಗ್ಗೆ ಪ್ರತಿಷ್ಠೆ ತೋರುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು ಮುಚ್ಚುವ ಸ್ಥಿತಿ ತಲುಪುವ ಆತಂಕವಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಪಶ್ಚಿಮ ಬಂಗಾಳದ ವಿಧೇಯಕವನ್ನೇ ನಕಲು ಮಾಡಲು ರಾಜ್ಯಸರ್ಕಾರ ಹೊರಟಿದೆ. ಅಲ್ಲಿ ಕಠಿಣ ಕಾನೂನು ತಂದಿದ್ದರಿಂದ ಉತ್ತಮ ಚಿಕಿತ್ಸೆ ದೊರೆಯದೆ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಉದ್ದೇಶಿತ ವಿಧೇಯಕದಿಂದ ವೈದ್ಯರಿಗಷ್ಟೇ ಅಲ್ಲ, ರೋಗಿಗಳು ಪರದಾಡುವ ಸ್ಥಿತಿ ಬರಬಹುದು ಎಂದರು.ನಾಡಿನ ಮೂಲೆ ಮೂಲೆಗಳಿಂದ ಬೆಳಗಾವಿಗೆ ಬಂದು ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾನಸಿಕ ಒತ್ತಡಕ್ಕೆ ವೈದ್ಯರು ಒಳಗಾದರೆ ಉತ್ತಮ ಚಿಕಿತ್ಸೆ ನೀಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಎಚ್.ಡಿ.ಕುಮಾರಸ್ವಾಮಿ ಅವರು, ಬೆಂಬಲ ವ್ಯಕ್ತಪಡಿಸಿದ್ದಲ್ಲದೆ, ಅಧಿವೇಶನದಲ್ಲಿ ವಿಧೇಯಕವನ್ನು ವಿರೋಧಿಸುವ ಭರವಸೆ ನೀಡಿದರು.
Comments